ಗುಂಡ್ಲುಪೇಟೆ: ಮಹಿಳೆಯೊಬ್ಬರ ಕೈಗೆ ಚಾಕುವಿನಿಂದ ಇರಿದು, ಆಕೆಯ ಕುತ್ತಿಗೆಯಲ್ಲಿದ್ದ ತಾಳಿ ಸರ ಕಳವು ಮಾಡಿರುವ ಘಟನೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಗಣೇಶ್ ಎಂಬುವರ ಪತ್ನಿ 35 ವರ್ಷದ ಸೌಮ್ಯ ಎಂಬುವವರ ಎಡಗೈಗೆ ಚಾಕುವಿನಿಂದ ಚುಚ್ಚಿ ತಾಳಿ ಸರ ಕದ್ದು ಪರಾರಿಯಾಗಿದ್ದಾನೆ.
ಮಂಗಳವಾರ ಮಧ್ಯಾಹ್ನ 1:20 ಸಮಯದಲ್ಲಿ ಯಾರೋ ಮನೆ ಬಾಗಿಲನ್ನು ಬಡಿದ ಶಬ್ದವಾಗಿ, ಬಾಗಿಲನ್ನು ತೆರೆದಾಗ ಅಪರಿಚಿತ ವ್ಯಕ್ತಿ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ ಸರವನ್ನು ಕಿತ್ತುಕೊಂಡು ಸ್ಥಳದಿಂದ ಓಡಿ ಹೋಗಿದ್ದಾನೆ.
ಈ ಘಟನೆ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಹುಡುಕಾಟಕ್ಕೆ ಪೊಲೀಸರು ಬಲೆ ಬಿಸಿದ್ದಾರೆ



0 Comments