ಆಲೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಅಡಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮಾರ್ಚ್ ತಿಂಗಳಿನಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ " ಪಡಿತರ ಆಹಾರ ಧಾನ್ಯ " ಹಂಚಿಕೆ ಪ್ರಮಾಣ ಬಿಡುಗಡೆಯಾಗಿದ್ದು, ಏಕ ಸದಸ್ಯ, ದ್ವಿ ಸದಸ್ಯ ಮತ್ತು ತ್ರಿ ಸದಸ್ಯರಿರುವ ಅಂತ್ಯೋದಯ ಪಡಿತರ ಚೀಟಿಗೆ 35 ಕೆ ಜಿ (ಪ್ರತಿ ಕಾರ್ಡ್ ಗೆ), ನಾಲ್ವರು ಸದಸ್ಯರಿಗೆ 45 ಕೆ ಜಿ (ಪ್ರತಿ ಕಾರ್ಡ್ ಗೆ), ಐವರು ಸದಸ್ಯರಿದ್ದರೆ 65 ಕೆ ಜಿ (ಪ್ರತಿ ಕಾರ್ಡ್ ಗೆ), ಆರು ಸದಸ್ಯರಿಗೆ 85 ಕೆ ಜಿ, ಏಳು ಸದಸ್ಯರಿಗೆ 105 ಕೆ ಜಿ (ಪ್ರತಿ ಕಾರ್ಡ್ ಗೆ) , 8 ಸದಸ್ಯರಿದ್ದರೆ 125 ಕೆಜಿ (ಪ್ರತಿ ಕಾರ್ಡಿಗೆ), ಹತ್ತು ಸದಸ್ಯರಿದ್ದರೆ 185 ಕೆ ಜಿ (ಪ್ರತಿ ಕಾರ್ಡ್ ಗೆ), 12 ಸದಸ್ಯರಿರುವ ಪ್ರತಿ ಕಾರ್ಡಿಗೆ 205 ಕೆ ಜಿ ಉಚಿತವಾಗಿ ನೀಡಲಾಗುವುದು ಬಿಪಿಎಲ್ (ಪಿಹೆಚ್ ಹೆಚ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 15 ಕೆ ಜಿ ಪಡಿತರ ಉಚಿತವಾಗಿ ವಿಚರಿಸಲಾಗುವುದು. ಕಡಿಮೆ ಪಡಿತರ ವಿತರಣೆ ಮಾಡಿದ್ದಲ್ಲಿ ಆಹಾರ ಇಲಾಖೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ದೂರನ್ನು ಸಲ್ಲಿಸುವಂತೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



0 Comments