ಹಾಸನ:ರೋಟರಿ ಕ್ಲಬ್ ಆಫ್ ಹಾಸನ ಮಿಡ್‌ಟೌನ್ ಪ್ರಾಯೋಜಕತ್ವದಲ್ಲಿ ಇಂಟರಾಕ್ಟ್ ಕ್ಲಬ್ ಆಫ್ ವಿಜಯಾ ಸ್ಕೂಲ್, "ಒಂದು ಮಗು, ಒಂದು ಪುಸ್ತಕ " ಎಂಬ ಪುಸ್ತಕ ದೇಣಿಗೆ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಅಭಿಯಾನವು ನಮ್ಮ ಸಮುದಾ ಯದಲ್ಲಿ ಶಿಕ್ಷಣ, ಸಾಕ್ಷರತೆ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು ಅದೇ ಸಮಯದಲ್ಲಿ ರೋಟರಿ ಇಂಟರ್ನ್ಯಾಶನಲ್ ಶಿಕ್ಷಣ ಮತ್ತು ಕಾನೂನು ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣದ ಮೇಲೆ ಕೇಂದ್ರೀಕರಿಸಿದೆ.
ಈ ಅಭಿಯಾನದಲ್ಲಿ ಒಟ್ಟು 2,429 ಪುಸ್ತಕಗಳನ್ನು ಸಂಗ್ರಹಿಸಿದ್ದು ಅಭಿಯಾನವು ಅದ್ಭುತ ಯಶಸ್ಸನ್ನು ಸಾಧಿಸಿರುವುದಕ್ಕೆ ದ್ಯೋತಕ ವಾಗಿದೆ. ಸಂಗ್ರಹಿಸಿದ ಪುಸ್ತಕಗಳನ್ನು ಕಥೆಗಳು, ಕಾದಂಬರಿಗಳು, ಜೀವನಚರಿತ್ರೆಗಳು, ಮಹಾಕಾವ್ಯಗಳು, ವಚನಗಳು, ಕವನಗಳು, ಯೋಗ, ವ್ಯಕ್ತಿತ್ವ ವಿಕಸನ (ಪೋಷಕರಿಗೆ ಪುಸ್ತಕಗಳು ಸೇರಿದಂತೆ), ಆರೋಗ್ಯ ಮತ್ತು ಅಡುಗೆ, ಅಧ್ಯಯನ ಸಾಮಗ್ರಿಗಳು, ವಾರ್ಷಿಕ ಪುಸ್ತಕಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ವರ್ಗೀಕರಿಸಲಾಗಿದೆ.
ಅಭಿಯಾನದಲ್ಲಿ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಟ್ರಾ÷್ಯಕಿಂಗ್ ಕಾರ್ಡ್ಗಳನ್ನು ವಿತರಿಸುವ ಅವರ ನೆರೆ ಹೊರೆಯ ಸಮುದಾಯದಲ್ಲಿ ಶಿಕ್ಷಣ, ಸಾಕ್ಷರತೆ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸುವ ಗುರಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರೋತ್ಸಾಹಿ ಸಲಾಯಿತು. ವಿದ್ಯಾರ್ಥಿಗಳು ತಮ್ಮ ಸ್ವಂತ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದಲ್ಲದೆ ತಮ್ಮ ನೆರೆ ಹೊರೆಯವರಿಂದ ಪುಸ್ತಕಗಳನ್ನು ದೇಣಿಗೆಯಾಗಿ ಸಂಗ್ರಹಿಸಿ ಪುಸ್ತಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದರು.
ವಿಜಯ ಶಾಲೆಯ ಸಂಸ್ಥಾಪಕ ನಿರ್ದೇಶಕರಾದ ತಾರ ಎಸ್ ಸ್ವಾಮಿಯವರು ಮಾತನಾಡಿ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಮಾಜ ಸೇವೆ ಮಾಡುವಂತೆ ಪ್ರೋತ್ಸಾಹಿಸಿದರು. ವಿಜಯಾ ಇಂಟರಾಕ್ಟ್ ಕ್ಲಬ್‌ನ ಅಧ್ಯಕ್ಷೆ ಬಿಂಬಿತಾ ವೈ.ಎಚ್ ಮತ್ತು ಕಾರ್ಯದರ್ಶಿ ತ್ರಿಭುವನ್ ಎಸ್.ಗೌಡ ಅವರು ಸಂಗ್ರಹದ ಅಂಕಿಅAಶಗಳನ್ನು ಮಂಡಿಸಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯಗಳು ಮತ್ತು ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುವುದು. ಈ ಮೂಲಕ ನಮ್ಮ ಸಮುದಾಯದ ಅನೇಕರ ಜ್ಞಾನ ಮತ್ತು ಶಿಕ್ಷಣವನ್ನು ಉತ್ಕöÈಷ್ಟಗೊಳಿಸಲು ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ವಿಜಯ ಶಾಲೆಯ ಅಧ್ಯಕ್ಷರಾದ ವೈ.ಎನ್.ಸುಬ್ಬಸ್ವಾಮಿಯವರು, ಖಣಟಿ ಡಾ. ತೇಜಸ್ವಿ, ಅಧ್ಯಕ್ಷರು ರೋಟರಿ ಕ್ಲಬ್ ಆಫ್ ಹಾಸನ ಮಿಡ್‌ಟೌನ್, ಖಣಟಿ ವೆಂಕಟೇಶ್- ಕಾರ್ಯದರ್ಶಿಗಳು ರೋಟರಿ ಕ್ಲಬ್ ಆಫ್ ಹಾಸನ ಮಿಡ್‌ಟೌನ್, ವಿಜಯ ಶಾಲೆಯ ಶೈಕ್ಷಣಿಕ ಮುಖ್ಯಸ್ಥೆ ಡಾ.ಶ್ರೀಲಕ್ಷಿ÷್ಮ, ಪ್ರಾಂಶುಪಾಲರಾದ ನಂದೀಶ ಕೆ.ಎಸ್. ಹಾಗೂವಿದ್ಯಾರ್ಥಿಗಳು ಹಾಜರಿದ್ದರು.



0 Comments