ಹಾಸನ: ಪಿಡಿಓ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಶರ್ಟ್ ಕತ್ತರಿಸಿದ ಅಧಿಕಾರಿಗಳು

 ಹಾಸನ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗೆ ಪರೀಕ್ಷೆ ಬರೆಯಲು ಬಂದ ಪರೀಕ್ಷಾರ್ಥಿಗಳು ತುಂಬುತೋಳಿನ ಬಟ್ಟೆ ಧರಿಸಿ ಬಂದ ಕಾರಣ ಅರ್ಧ ತೋಳಿನವರಿಗೆ ಬಟ್ಟೆ ಕತ್ತರಿಸಿ ನಂತರ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಘಟನೆ ನಗರದ ಎಲ್ ವಿ ಪಾಲಿಟೆಕ್ನಿಕ್‌ನಲ್ಲಿ ನಡೆದಿದೆ.

ಇಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನಗರದ ಎಲ್‌ವಿ ಪಾಲಿಟೆಕ್ನಿಕ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಕೆಲವು ಅಭ್ಯರ್ಥಿಗಳು ತುಂಬುತೊಳಿನ ಶರ್ಟ್ ಧರಿಸಿ ಬಂದ ಕಾರಣ ವಸ್ತ್ರ ಸಂಹಿತೆ ನಿಯಮದಡಿ ಅರ್ಧ ತೋಳಿನವರೆಗೆ ಶರ್ಟ್ ಕತ್ತರಿಸಿ ನಂತರ ಪರೀಕ್ಷೆ ಬರೆಯಲು ಅನುವು ಮಾಡಿಕೊಳ್ಳಲಾಯಿತು. ಈ ವೇಳೆ ಪರೀಕ್ಷಾರ್ಥಿಗಳು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.

ಹಾಲ್ ಟಿಕೆಟ್‌ನಲ್ಲಿ ನಿಯಮಗಳನ್ನು ಹಾಕಲಾಗಿದೆ. ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ ಪರೀಕ್ಷೆ ಬರೆಯಲು ಬಂದಿದ್ದೀರಾ, ನಮ್ಮ ಕರ್ತವ್ಯ ನಾವು ಮಾಡಲೇಬೇಕು ಎಂದ ಅಧಿಕಾರಿಗಳು ಕಡೆಗೆ ಕತ್ತರಿಯಿಂದ ಬಟ್ಟೆ ಕತ್ತರಿಸಿ ನಂತರ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಟ್ಟರು. ಈ ವೇಳೆ ಪರೀಕ್ಷಾರ್ಥಿಗಳು ಬೇಸರದಿಂದಲೇ ಪರೀಕ್ಷಾ ಬರೆಯಲು ತೆರಳಿದರು.

Post a Comment

0 Comments