ಹಾಸನ: ಪಾರು ಪಾರ್ವತಿ ಸಿನಿಮಾ ಬಹಳ ಹೊಸ ರೀತಿಯಲ್ಲಿ ಟ್ರಾವೆಲರ್ ಜರ್ನಿಯನ್ನು ಈಗೀನ ಜನತೆಯನ್ನ ಥೀಮ್ ಆಗಿ ತೆಗೆದುಕೊಂಡು ಯಾವೆಲ್ಲಾ ರೀತಿಯ ಚಾಲೆಂಜಸ್‌ಗಳನ್ನು ತೆಗೆದುಕೊಂಡು ಮುಖ್ಯವಾಗಿ ಒಂದು ಹುಡುಗಿ ತನ್ನ ಜರ್ನಿಯನ್ನು ಸೊಲೋ ಟ್ರಾವೆಲರ್ ಆಗಿ ಯಾವ ರೀತಿಯಲ್ಲಿ ನಿಭಾಯಿಸುತ್ತಾಳೆ ಎನ್ನುವುದು ಸಿನಿಮಾದ ಮುಖ್ಯ ಉದ್ದೇಶವಾಗಿದೆ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಟಿ ದೀಪಿಕಾ ದಾಸ್ ಅವರು ತಿಳಿಸಿದರು.
ಈ ಸಿನಿಮಾದಲ್ಲಿ ಮಿಥುನ್ ಅನ್ನುವ ಕ್ಯಾರೆಕ್ಟರ್‌ಲ್ಲಿ ಫಾವಾರ್ಜ್ ಅಶ್‌ರಫ್ ಅವರು ಮಲಯಾಳಿ ಹುಡುಗ ಹಾರ್ಫ್ ಕನ್ನಡಿಗನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾವು ಕುಟುಂಬದ ಜೊತೆ ನೊಡುವಂತಹ ಸಿನಿಮಾ ಎಂದು ನಿರ್ದೇಶಕರಾದ ರೋಹಿತ್ ಕೀರ್ತಿ ತಿಳಿಸಿದರು. ಪಾಯಲ್ ಅನ್ನುವ ಕ್ಯಾರೆಕ್ಟರ್ ಬಹಳ ವಿಭಿನ್ನ ರೀತಿಯಲ್ಲಿ ಎಲ್ಲರಲ್ಲೂ ಕಾಡುವಂತಹ ಮನಸ್ಸಿಗೆ ಹತ್ತಿರವಾಗುವ ಕ್ಯಾರೆಕ್ಟರ್ ಆಗಿದೆ ಎಂದು ತಿಳಿಸಿದರು.
ಈ ಸಿನಿಮಾದಲ್ಲಿ ಮುಖ್ಯವಾಗಿ ವಯಸ್ಸಾದಂತಹ ಅಜ್ಜಿಯನ್ನ ಹಾಗೂ ಅವರ ಆಸೆಯನ್ನ ಯಾವೆಲ್ಲಾ ರೀತಿಯಲ್ಲಿ ಪೂರೈಸುತ್ತಾರೆ ಎನ್ನುವುದು ಮುಖ್ಯವಾದ ಒಂದು ವಿಷಯ ಎಂದು ತಿಳಿಸಿದರು. ಸಿನಿಮಾ ಚಿತ್ರೀಕರಣವನ್ನು ಬೆಂಗಳೂರು, ಗೋವಾ, ಮಹಾರಾಷ್ಟ್ರ, ಬಿಹಾರ್, ಹಾಗೂ ಉತ್ತರಾಕಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದರು.
ಪ್ರತಿಯೊಬ್ಬರು ಕನ್ನಡ ಸಿನಿಮಾವನ್ನು ಚಿತ್ರಮಂದಿರದಲ್ಲೇ ಹೋಗಿ ನೋಡಿ ಕನ್ನಡ ಚಿತ್ರವನ್ನು ಹಾಗೂ ಕನ್ನಡ ಇಂಡಸ್ಟ್ರಿಯನ್ನು ಉಳಿಸಿ ಬೆಳೆಸಿ ಎಂದರು. ಪಾರು ಪಾರ್ವತಿ ಸಿನಿಮಾ ಬಹಳ ಯಶಸ್ವಿಯಾಗಿ ಎಲ್ಲೆಡೆ ತೆರೆಕಾಣುತ್ತಿದ್ದು, ಉತ್ತಮವಾದ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಸಂತೋಷದ ವಿಷಯವನ್ನು ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



0 Comments