ಕಿರಗಡಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ( ಆಟೋ ಸೂರಿ ) ಅವಿರೋಧ ಆಯ್ಕೆ



ಆಲೂರು ತಾಲ್ಲೂಕು ಕಿರಗಡಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ್ ( ಆಟೋ ಸೂರಿ ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಹಾಲು ಉತ್ಪಾದಕರ ಷೇರುದಾರರಿಗೆ, ಊರಿನ ಹಿರಿಯ ಮುಖಂಡರುಗಳಿಗೆ ಕೃತಜ್ಞತೆ ತಿಳಿಸಿದ್ದಾರೆ, ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಚುನಾವಣಾಧಿಕಾರಿಗಳು ನೂತನ ನಿರ್ದೇಶಕರು, ಮಾಜಿ ಹಾಗೂ ಹಾಲಿ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಊರಿನ  ಗ್ರಾಮಸ್ಥರು, ಸ್ನೇಹಿತರು ಹಾಜರಿದ್ದು ನೂತನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಅಭಿನಂದಿಸಿದ್ದಾರೆ.

Post a Comment

0 Comments