ಹಾಸನ :- ನಾವು ಮಾಡುವ ತಪ್ಪುಗಳಿಗೆ ನಮಗಾಗುವ ತಪ್ಪಿನ ಅರಿವು ಮತ್ತು ಪಶ್ಚತಾಪವೆ ಪರಿವರ್ತನೆಯ ಮೊದಲ ಹೆಜ್ಜೆಯಾಗಿದೆ. ನಮ್ಮ ತಪ್ಪುಗಳಿಗೆ ಪರಿವರ್ತನೆಯನ್ನು ಹಲವಾರು ಮೂಲಗಳಿಂದ ಮಾಡಿಕೊಳ್ಳಬಹುದಾಗಿದೆ. ಬಾಹ್ಯ ಪ್ರೇರಣೆಯೂ ನಮ್ಮನ್ನು ಆಂತರಿಕವಾಗಿ ಪರಿವರ್ತನೆಯಾಗಲು ಕಾರಣವಾಗಬಲ್ಲದು ಅದಕ್ಕೆ ಧ್ಯಾನ, ಯೋಗಾಭ್ಯಾಸ, ಪುಸ್ತಕಗಳನ್ನು ಓದುವ ಹವ್ಯಾಸ, ಚಿತ್ರಕಲೆ, ಇನ್ನಿತರ ಕಳೆಗಳಂತಹ ಉತ್ತಮ ಅಭಿರುಚಿಗಳು ಸಹಕಾರಿಯಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ದಾಕ್ಷಾಯಿಣಿ ಜಿ.ಕೆ. ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಕಾರಾಗೃಹ ಇವರುಗಳ ಸಂಯುಕ್ತಾಶ್ರಯದಲ್ಲಿ ಬಂಧಿವಾಸಿಗಳಿಗೆ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಆಕಸ್ಮಿಕ ಮತ್ತು ಅನಿವಾರ್ಯ ಘಟನೆಗಳಿಂದಾಗಿ ಆದ ತಪ್ಪುಗಳಿಗೆ ಪರಿವರ್ತನೆಯ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು ಬಂಧೀಖಾನೆಯಿAದ ಹೊರ ಬಂದ ನಂತರ ಹೊಸ ಜೀವನವನ್ನು ಸೃಷ್ಟಿಸಿಕೊಳ್ಳಲು ಅವಕಾಶವಿದೆ. ಕೃತ್ಯಗಳಿಗೆ ಶಿಕ್ಷೆ ನೀಡುವ ಅಥವಾ ಬಿಡುಗಡೆ ಮಾಡುವ ಅಧಿಕಾರ ನ್ಯಾಯಾಲಯಗಳಿಗೆ ಮಾತ್ರವೇ ಇದೆ. ಆದರೆ ಪರಿವರ್ತನೆಯನ್ನು ನಮಗೆ ನಾವೇ ಹೊಂದಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ವಕೀಲರಾದ ಬಿ. ಚಂದ್ರಶೇಖರ್ ಅವರು ಮಾತನಾಡಿ ಸಮಸ್ಯೆಗಳ ಮೂಲವನ್ನು ಅರಿತಾಗ ಮಾತ್ರವೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ. ಆಗಿರುವ ತಪ್ಪುಗಳ ಬಗ್ಗೆ ಯೋಚಿಸುವ ಬದಲು ಮುಂದಾಗುವುದರ ಬಗ್ಗೆ ಯೋಚಿಸಿದಲ್ಲಿ ನೆಮ್ಮದಿಯಿಂದ ಕೂಡಿದ ಜೀವನವನ್ನು ಸಾಗಿಸಲು ಸಾಧ್ಯವಿದೆ. ಎಲ್ಲರೂ ಬಂಧಿಖಾನೆಯಲ್ಲಿರುವುದನ್ನು ಶಿಕ್ಷೆಯೆಂದು ಭಾವಿಸದೆ ಪರಿವರ್ತನೆ ಮತ್ತು ಸುಧಾರಣೆಯ ಕೇಂದ್ರವೆAದು ಭಾವಿಸಿ ಪರಿವರ್ತನೆ ಹೊಂದುವ ಮೂಲಕ ಬೇಗ ಬಿಡುಗಡೆಯಾಗಿ ಹೊಸ ಜೀವನ ಕಂಡುಕೊಳ್ಳಬೇಕೆAದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಎಚ್.ಎ ಪರಮೇಶ್, ಜೈಲರ್ ಅನಿಲ್ ಕುಮಾರ್, ವಕೀಲರಾದ ರಾಮ, ಇತರರು ಉಪಸ್ಥಿತರಿದ್ದರು.



0 Comments