ಹಾಸನ: ವೀರಶೈವ ಸಮಾಜದ ಮುಖಂಡ, ಏಕಾಂಗಿ ಹೋರಾಟಗಾರ ಕೆ.ಎಸ್. ತೀರ್ಥಪ್ಪ (78) ಗುರುವಾರ ನಿಧನರಾದರು.
ಬೇಲೂರು ತಾಲ್ಲೂಕು ಕೆಸಗೋಡು ಗ್ರಾಮದ ತೀರ್ಥಪ್ಪ ಅವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು, ಪುತ್ರಿ ಇದ್ದಾರೆ.
ಗ್ರಾಮದ ಅವರ ಜಮೀನಿನಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಾರ್ವಜನಿಕರಿಗೆ ಚಿರಪರಿಚಿತ ತೀರ್ಥಪ್ಪ:
ಕೆ.ಎಸ್. ತೀರ್ಥಪ್ಪ ಅವರು ಏಕಾಂಗಿ ಹೋರಾಟದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಬೇಲೂರು ತಾಲ್ಲೂಕಿನ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಹೋರಾಟ ನಡೆಸುತ್ತಿದ್ದರು. ಖಾಲಿ ಕೊಡ ಹಿಡಿದು ಒಬ್ಬರೇ ಕುಳಿತು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟಿಸಿ, ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಹೀಗೆ ಯಾವುದಾದರೂ ಸಮಸ್ಯೆ ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಜರಾಗುತ್ತಿದ್ದರು.ಸ್ಥಳೀಯ ಅಧಿಕಾರಿಗಳಿಂದ ಸ್ಪಂದನೆ ಅಥವಾ ಪರಿಹಾರ ಸಿಗದಿದ್ದರೆ ಬೆಂಗಳೂರಿಗೆ ಹೋಗಿ ಸಂಬಂಧಿಸಿದ ಅಧಿಕಾರಿ ಹಾಗು ಸಚಿವರಿಂದ ಶಿಫಾರಸು ಪತ್ರಗಳನ್ನು ತರುತ್ತಿದ್ದರು. ಕೆ.ಎಸ್. ತೀರ್ಥಪ್ಪ ಅವರು ತುಮಕೂರು ಸಿದ್ಧಗಂಗಾ ಮಠದ ಪರಮ ಭಕ್ತರಾಗಿದ್ದರು ಮಾತ್ರವಲ್ಲದೆ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರ, ಪುಸ್ತಕ, ಕ್ಯಾಲೆಂಡರ್ ಮಾರಾಟ ಮಾಡಿ ಆ ಹಣವನ್ನು ಶ್ರೀಮಠಕ್ಕೆ ತಲುಪಿಸುತ್ತಿದ್ದರು. ಅನಾರೋಗ್ಯದಿಂದ ಇತ್ತೀಚೆಗೆ ಹೋರಾಟಗಳಿಂದ ದೂರವಿದ್ದರು.



0 Comments