ಸಂಘಟನೆಗೆ ಹಾಸನದಲ್ಲಿ 3 ವಾರ ಠಿಕಾಣಿ: ಎಚ್‌.ಡಿ. ದೇವೇಗೌಡ

ಹಾಸನ: ‘ಸಂಸತ್ತಿನ ಅಧಿವೇಶನ ಮುಗಿದ ಬಳಿಕ ಹಾಸನಕ್ಕೆ ಬರುತ್ತೇನೆ. ಮೂರು ವಾರ ಇಲ್ಲಿಯೇ ಇರುತ್ತೇನೆ. ಪಕ್ಷದ ಸಂಘಟನೆಗಾಗಿ ಕಾರ್ಯಕರ್ತರು, ಮುಖಂಡರ ಸಭೆ ನಡೆಸುತ್ತೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.


ಇತ್ತೀಚೆಗೆ ನಿಧನರಾದ ವಿಧಾನಪರಿಷತ್ ಮಾಜಿ ಸದಸ್ಯ ಪಟೇಲ್‌ ಶಿವರಾಂ ಅವರ 11ನೇ ದಿನ ಕಾರ್ಯಕ್ರಮಕ್ಕಾಗಿ ತಾಲ್ಲೂಕಿನ ದೊಡ್ಡಗೇಣಿಗೆರೆ ಗ್ರಾಮಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಮ್ಮ ಕಾರ್ಯಕರ್ತರು, ಮುಖಂಡರ ಜೊತೆಗೆ ಸಮಾಲೋಚನೆ ನಡೆಸಿ, ಪಕ್ಷದ ಸಂಘಟನೆ, ಹೋರಾಟದ ಕುರಿತು ಕಾರ್ಯತಂತ್ರ ರೂಪಿಸಲಾಗುವುದು’ ಎಂದರು.

Post a Comment

0 Comments