ಜನವರಿ 5 ರಿಂದ ಬಸ್ ದರ ಏರಿಕೆ

ಬೆಂಗಳೂರು:ರಾಜ್ಯ ಸರ್ಕಾರ ( Karnataka state government) ಜನವರಿ 5 ರಿಂದ ಬಸ್ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದೆ.

ಶಕ್ತಿ ಯೋಜನೆ, ಡೀಸೆಲ್‌ ದರ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ನಷ್ಟಕ್ಕೆ ಸಿಲುಕಿರುವ ಸರ್ಕಾರ ಬಸ್‌ ಟಿಕೆಟ್‌ ದರವನ್ನು (bus ticket rate )15% ಏರಿಕೆ ಮಾಡಿದೆ.

ಬಿಎಂಟಿಸಿ ಬಸ್(Bus) ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಇಂದಿನ ಕ್ಯಾಬಿನೆಟ್‌ ಸಭೆಯ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರವರು ದರ ಏರಿಕೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

Post a Comment

0 Comments