ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ-೨೦೨೩ ಪ್ರಕಟಗೊಂಡಿದೆ.
ಹಾಸನ ಜಿಲ್ಲೆಯ ಉದಯ ವರದಿ ದಿನಪತ್ರಿಕೆಯ ಸಂಪಾದಕ ವೆಂಕಟೇಶ್ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿವಿಧ ದತ್ತಿ ಪ್ರಶಸ್ತಿ-೨೦೨೪ಕ್ಕೆ ಭಾಜನ ರಾಗಿದ್ದಾರೆ.
ಕೃಷಿಯಲ್ಲಿನ ಅತ್ಯುತ್ತಮ ವರದಿ, ಲೇಖನ ಹಾಗೂ ಅಂಕಣ ಬರಹಗಾರರ ವಿಭಾಗದಲ್ಲಿ ಇವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೆಂಕಟೇಶ್ ಅವರು ಕಳೆದ ೨೫ ವರ್ಷಗಳಿಂದಲೂ ಪತ್ರಕರ್ತ ರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರು ತಮ್ಮದೇ ಸಂಪಾದಕತ್ವದಲ್ಲಿ ಉದಯ ವರದಿ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ.
ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ವೆಂಕಟೇಶ್ ಅವರಿಗೆ ಕರ್ನಾಟಕ ಕಾರ್‍ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಹಾಸನ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಹಾಸನ ಜಿಲ್ಲಾ ಮುದ್ರಣಕಾರ ಸಂಘವು ಅಭಿನಂದನೆ ಸಲ್ಲಿಸಿದೆ.
%20copy.jpg)
.jpeg)
.jpeg)
.jpeg)



0 Comments