ATM ಯಂತ್ರವನ್ನೇ ಕದ್ದೊಯ್ದ ಕಳ್ಳರು

ಹಾಸನ ಹೊರ ವಲಯದ  ಹನುಮಂತಪುರ ರಸ್ತೆ ಬದಿ ಬದಿಯ ಇಂಡಿಯಾ ಒನ್‌ ಎಟಿಎಂ ಮಿಷನ್ ಅನ್ನು  ಕಳ್ಳರು ಕದ್ದೊಯ್ದಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.


ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ಎಟಿಎಂ ಮಿಷನ್ ಅದಾಗಿದ್ದು ಯಾವಾಗಲೂ ಜನರು ಓಡಾಡುವ ಜಾಗವಾಗಿದೆ. ಕೈಗಾರಿಕಾ ಪ್ರದೇಶವಾಗಿರುವುದರಿಂದ ದಿನದ 24 ಗಂಟೆ ಜನ ಸಂಚಾರ ಇರುತ್ತದೆ. ಆದರೂ ಮಿಷಿನ್ ಕಳುವಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದ. 

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು ಶ್ವಾನದಳದ ನೆರವಿನಿಂದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Post a Comment

0 Comments