ಹಾಸನ : ಜಾನುವಾರು ಕಳ್ಳತನಕ್ಕೆ ಬಂದು ಸಿಕ್ಕಿ ಬಿದ್ದ ಕದೀಮರು

 ಹಾಸನ: ಜಾನುವಾರು ಕದಿಯಲು ಬಂದ ಕ ..ಳ್ಳರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹೊಳೆನರಸೀಪುರ ತಾಲ್ಲೂಕು ನಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಲೇಲ್ಯಾಂಡ್ ವಾಹನದಲ್ಲಿ ಬಂದಿದ್ದ ಕಿಡಿಗೇಡಿಗಳು ರಾತ್ರಿ ಹೊತ್ತು ಜಾನುವಾರುಗಳನ್ನು ಕದಿಯುತ್ತಿದ್ದರು.

ನಗರನಹಳ್ಳಿ ಗ್ರಾಮದ ರಾಮು ಎಂಬುವವರ ಎಮ್ಮೆಯನ್ನು ಕದ್ದು ನಂತರ ಕದ್ದಿದ್ದ ಮೂಡಲಮಾಯಿಗೌಡನಹಳ್ಳಿ ಗ್ರಾಮದಲ್ಲಿ ಕರಾಮತ್ತು ಪ್ರದರ್ಶಿಸಲು ಮುಂದಾಗಿದ್ದರು.

ಮೂವರನ್ನು ಹಿಡಿದು ವಿಚಾರಿಸಿದಾಗ ಜಾನುವಾರು ಕದಿಯಲು ಬಂದಿದ್ದೆಂದು ಗೊತ್ತಾಗಿ ಮೂವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದರು. ಗುಂಪಿನಲ್ಲಿದ್ದ ಒಬ್ಬ ಮಾತ್ರ ಎಸ್ಕೆಪ್ ಆಗಿದ್ದಾನೆ ಎನ್ನಲಾಗಿದೆ .

ಸ್ಥಳಕ್ಕೆ ಹಳ್ಳಿಮೈಸೂರು ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ

Post a Comment

0 Comments