BREAKING : ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿ: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮುಂದುವರೆಸಲು ಅನುಮೋದನೆ

ನವದೆಹಲಿ: ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರೈತರಿಗೆ ಮತ್ತೊಂದು ಮಹತ್ವದ ಸಿಹಿ ಸುದ್ದಿ ನೀಡಿದ್ದು, ಪಿಎಂಎಫ್ ಬಿಐ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಮುಂದುವರೆಸಲು ಅನುಮೋದನೆ ನೀಡಿದೆ.

2021-22 ರಿಂದ 2025-26 ರವರೆಗೆ ಒಟ್ಟು 69,515.71 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ನಿರ್ಧಾರವು ರೈತರಿಗೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆ ನಾಶವನ್ನು ತಪ್ಪಿಸಲು ಸಹಾಯ ಮಾಡುತ್ತಿದ್ದು, ದೇಶಾದ್ಯಾಂತ ರೈತರಿಗೆ ರಕ್ಷಣೆ ಒದಗಿಸಲು ಯೋಜನೆಯು ಪ್ರಯೋಜನಕಾರಿಯಾಗಿದೆ.

Post a Comment

0 Comments