ಅರಕಲಗೂಡು ಜಯಕುಮಾರ್ ಚೊಚ್ಚಲ ನಿರ್ದೇಶನದ ‘ಒಂದಾನೊಂದು ಕಾಲದಾಗ.. ಕಿರುಚಿತ್ರ ಗೋವಾ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಗೆ ಆಯ್ಕೆ ಗೌರವ ಪಡೆದಿದೆ. ಚಿತ್ರೋತ್ಸವದಲ್ಲಿ ಪುರಸ್ಕಾರ ಹಾಗೂ ಪ್ರದರ್ಶನ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕನ್ನಡದ ಹೆಮ್ಮೆಯ ನಟ ಸುಚೇಂದ್ರ ಪ್ರಸಾದ್ ಮತ್ತು ಪೂಜಾ ರಘುನಂದನ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿ ಕೊಂಡಿದ್ದಾರೆ. ಕಾಲಘಟ್ಟದಲ್ಲಿ ಪರಿಸರದ ಬದಲಾವಣೆಯ ವಿಷಾಧನಿಯ ಸಂಗತಿಗಳನ್ನು ‘ಒಂದಾನೊಂದು ಕಾಲದಾಗ ಚಿತ್ರದಲ್ಲಿ ಅಭಿವ್ಯಕ್ತಿಸಲಾಗಿದೆ.
ವಿಪರೀತ ಮಳೆ ಸುರಿಯುವ ಸಕಲೇಶಪುರದ ಪಶ್ಚಿಮ ಘಟ್ಟದ ತಪ್ಪಲು ಕಾಗಿನಹರೆ, ಬಾಳೆಹಳ್ಳ ಹಾಗೂ ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಬಹುತೇಕ ಹಾಸನ ನಗರದ ಕಲಾವಿದರಾದ ವಿಶ್ವಾಸ್ ಉಲಿವಾಲ, ವೇದಾ ಶಿವಕುಮಾರ್, ರಘುನಂದನ್, ಶೇಷಾದ್ರಿ, ಶರತ್,ಪವನ್, ವಿಕಾಸ್ ಕಲ್ಲಹಳ್ಳಿ ಅಬಿನಯಿಸಿದ್ದಾರೆ. ಬೆಂಗಳೂರಿನ ಬ್ಲೂ ಹೊರೈಝಾನ್ ಅರ್ಪಿಸಿ, ಪಂಕಜಾ ವಿಜೇಂದ್ರ ಚಿತ್ರ ನಿರ್ಮಿಸಿದ್ದಾರೆ.ಸಹ ನಿರ್ದೇಶನ ಪ್ರಶಾಂತ್ ಗಾಣಿಗ, ಸಾಹಸ್ ಗೌಡ, ಛಾಯಾಗ್ರಹಣ ಕೌಶಿಕ್ ಪುರೋಹಿತ್ ಮತ್ತು ಕೃಷ್ಣ ಧನೂರ್ಕರ್, ಸಂಕಲನ ಉದಯ ಜಗಳೂರು, ಗೀತ ಸಾಹಿತ್ಯ ಸಿದ್ದು ಕೋಡಿಪುರ ಗಾಯಕರು ಅನುಪಮ ಶಶಿಧರನ್, ಸಂಗೀತ ಪ್ರೇಮ್ ಭರತ್ ಅವರದ್ದು. ಚಿತ್ರದ ಗೀತೆಯನ್ನು ಉಚ್ಚಂಗಿ, ಅತ್ತಿಹಳ್ಳಿ, ಹೊಂಗಡಹಳ್ಳದಲ್ಲಿ ಚಿತ್ರೀಕರಿಸಲಾಗಿತ್ತು.
ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಗೌರವ ಪಡೆದ ಒಂದಾನೊಂದು ಕಾಲದಾಗ ಕಿರುಚಿತ್ರ ಫೆಬ್ರವರಿ ತಿಂಗಳಲ್ಲಿ ಹಾಸನದಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗುವುದು, ದಿನಾಂಕ ಪ್ರದರ್ಶನದ ಸ್ಥಳದ ಮಾಹಿತಿ ಸಧ್ಯದಲ್ಲೆ ತಿಳಿಸಲಾಗುವುದು ಎಂದು ನಿರ್ದೇಶಕ ಅರಕಲಗೂಡು ಜಯಕುಮಾರ್ ತಿಳಿಸಿದ್ದಾರೆ.



0 Comments