ಅಕ್ರಮ ಗುಡಿಸಲು ತೆರವುಗೊಳಿಸಿ ನ್ಯಾಯ ಕೊಡಿಸಿ : ಮಲ್ಲಾಪುರ ಗ್ರಾಮದ ಕುಟುಂಬದವರಿಂದ ಪ್ರತಿಭಟನೆ

 ಹಾಸನ: ಸರ್ವೆ ನಂ:೧೩/ಪಿ೩ ರಲ್ಲಿ ೪ ಎಕರೆ ೨೦ ಗುಂಟೆ ಜಮೀನು ಇದ್ದು, ಈ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಹಾಕಲು ಮುಂದಾಗಿರುವ ಬಗ್ಗೆ ದೂರು ನೀಡಿದರು ಸಹ ಗುಡಿಸಲು ತೆರವು ಗೊಳಿಸಲು ವಿಫಲಲಾಗಿರುವ ಬೇಲೂರು ತಹಸೀಲ್ದಾರರಾಗಿರುವ ಮಮತಾ ರವರರನ್ನು ಕೂಡಲೆ ಸೇವೆಯಿಂದ ಅಮಾನತ್ತು ಗೊಳಿಸುವಂತೆ ಡಿಸಿ ಕಛೇರಿ ಆವರಣದಲ್ಲಿ ಮಲ್ಲಾಪುರ ಗ್ರಾಮದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೆ ವೇಳೆ ಗ್ರಾಮದ ಮೋಹನ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿಗೆ ಸೇರಿದ ಮಲ್ಲಾಪುರ ಗ್ರಾಮದಲ್ಲಿ ಸರ್ವೆ ನಂ:೧೩/ಪಿ೩ ರಲ್ಲಿ ೪ ಎಕರೆ ೨೦ ಗುಂಟೆ ಜಮೀನು ಇದ್ದು, ನಮ್ಮ ತಂದೆ ರುದ್ರಯ್ಯ ಬಿನ್ ಲೇಟ್ ಭೈರಯ್ಯ ರವರ ಹೆರಿನಲ್ಲಿದೆ. ಈ ಜಮೀನಿಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳನ್ನು ಹೊಂದಿರುತ್ತೇವೆ. ಹೀಗಿದ್ದರೂ ಕೂಡ ಈ ಜಾಗಕ್ಕೆ ಅಕ್ರಮವಗಿ ಗುಡಿಸಲು ಹಾಕಲು ನಮ್ಮ ಗ್ರಾಮದವರೇಯಾದ ಓದೇಶ ಮತ್ತು ಭೈರಯ್ಯ ಎಂಬುವವರು ಮುಂದಾಗಿರುತ್ತಾರೆ ಎಂದು ದೂರಿದರು. ಈ ಬಗ್ಗೆ ಅನೇಕ ಬಾರಿ ತಹಸೀಲ್ದಾರ್ ರಾಗಿರುವ ಮಮತಾ ರವರಿಗೆ ದೂರು ನೀಡಿದರೂ ಕೂಡ ಪ್ರಯೋಜನವಾಗಿರುವುದಿಲ್ಲ. ಕಾರಣ ತಹಾಸೀಲ್ದಾರರೇ ಅವರಿಗೆ ಗುಡಿಸಲು ಹಾಕಲು ಕುಮ್ಮುಕ್ಕು ನೀಡಿತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಅನುಮಾನಿಸಿದರು. ಈ ಮಧ್ಯೆ ಸುಮಾರು ೨ ರಿಂದ ೩ ಬಾರಿ ಸರ್ವೆಯನ್ನು ಸಹ ಮಾಡಿಸಲಾಗಿರುತ್ತದೆ. ಮತ್ತು ಸ್ಥಳಕ್ಕೆ ತಹಾಸೀಲ್ದಾರು ಬಂದಾಗ ಓದೇಶ ಬಿನ್ ಭೈರಯ್ಯ, ಭೈರಯ್ಯ ಬಿನ್ ದೊಡ್ಡಯ್ಯ ಮತ್ತು ಇತರರು ಕದ್ದು ಓಡಿ ಹೋಗುತ್ತಾರೆ. ಮತ್ತು ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡಲು ಮುಂದಾಗುತ್ತಾರೆ ಆದರೂ ಸಹ ಯಾವುದೇ ಇದೂವರೆಗೂ ಕಾನೂನು ಕ್ರಮ ಜರುಗಿಸಿರುವುದಿಲ್ಲ. ಈ ಎಲ್ಲಾ ಬೆಳವಣಿಗೆಯನ್ನು ನೋಡಿದರೆ ತಹಾಸೀಲ್ದಾರವರು ರಾಜಕೀಯ ಮತ್ತು ಹಣದ ಆಮೀಶಕ್ಕೆ ಒಳಗಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ಆರೋಪಿಸಿದರು. ಆದ್ದರಿಂದ ಕೂಡಲೇ ಬಡವರ ವಿರೋಧಿ ತಹಸೀಲ್ದಾರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಅಕ್ರಮವಾಗಿ ಹಾಕಿರುವ ಗುಡಿಸಲನ್ನು ತೆರವುಗೊಳಿಸಿ ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಕೋರಿದರು.

ಪ್ರತಿಭಟನೆಯಲ್ಲಿ ಗ್ರಾಮದ ಮೋಹನ್ ಕುಟುಂಬದವರಾದ ಕೆ.ಆರ್. ಅನೀತಾ, ಶಿವಮ್ಮ, ಲಕ್ಷ್ಮಣ್, ಪ್ರಿಯಾಂಕ, ಚೇತನ್, ರುದ್ರಯ್ಯ ಇತರರು ಉಪಸ್ಥಿತರಿದ್ದರು.

Post a Comment

0 Comments