ತಾಳೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ: ಕಬ್ಬಿನಹಳ್ಳಿ ಜಗದೀಶ್ ಬಣ ಮೇಲುಗೈ

 ಆಲೂರು : ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಹಾಲಿ ಹಾಸನ ಹೆಚ್ ಡಿ. ಸಿ. ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ರವರ ಬಣ ಮೇಲುಗೈ ಸಾಧಿಸಿದ್ದು 12 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ.

ಸಹಕಾರ ಸಂಘವು ಒಟ್ಟು 12 ಸದಸ್ಯರ ನಾಮಬಲ ಹೊಂದಿದ್ದು, ಹಿಂದುಳಿದ ವರ್ಗ-ಎ ಮೀಸಲು ಸ್ಥಾನಕ್ಕೆ ಟಿ.ಬಿ ರಾಜಶೇಖರ್, ಹಿಂದುಳಿದ ವರ್ಗ-ಬಿ ಸ್ಥಾನಕ್ಕೆ ಎಸ್.ಆರ್ ಹರೀಶ್, ಮಹಿಳಾ ಮೀಸಲು ಸ್ಥಾನಕ್ಕೆ ವಸಂತಮ್ಮಹಾಗೂ ನೀಲಮ್ಮ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದ 7 ಸ್ಥಾನಗಳಿಗೆ ಹೆಚ್ಚು 14 ಮಂದಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅನಿವಾರ್ಯವಾಗಿತ್ತು, ಈ ಪೈಕಿ ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಸಿ.ಎಂ. ಶ್ರೀನಿವಾಸ್ 255 ಮತಗಳನ್ನು, ಎಂ.ಜಿ ಸೋಮಶೇಖರ್ 256 ಮತಗಳನ್ನು, ಜಿ.ಕೆ.ವೆಂಕಟೇಶ್ 186 ಮತಗಳನ್ನು, ಬಿ.ವೈ.ಶಿವೇಗೌಡ 173 ಮತಗಳನ್ನು, ಟಿ.ಇ ಧರ್ಮ 153 ಮತಗಳನ್ನು, ಮಂಜುನಾಥ್ 216 ಮತಗಳನ್ನು ಪಡೆಯುವ ನಿರ್ದೇಶಕರುಗಳಾಗಿ ಆಯ್ಕೆಯಾದರೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಹೆಚ್.ಆರ್ ಮಂಜುನಾಥ್ 16 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರ ಹೆಚ್. ಆರ್ ಮಂಜುನಾಥ್ 16 ಮತಗಳನ್ನು ಪಡೆಯುವ ಮೂಲಕ ಜಯಗಳಿದರೆ.

ಸಾಲಗಾರರ ಕ್ಷೇತ್ರ ಸಾಮಾನ್ಯ ಕ್ಷೇತ್ರಕ್ಕೆ ಉಮೇಶ್ ಬೆಳ್ಳಾವರ 114 ಮತಗಳನ್ನು, ಕೇಶವೇಗೌಡ ಸಮುದ್ರವಳ್ಳಿ 108 ಮತಗಳನ್ನು, ಪುಟ್ಟಸ್ವಾಮಿಗೌಡ ಜಿ.ಜಿ ಕೊಪ್ಪಲು 101ಮತಗಳನ್ನು, ಬಸವಲಿಂಗಪ್ಪ ನಿಲುವಾಗಿಲು 106, ಮಲ್ಲೇಶ್ ಜಿ.ಜಿ ಕೊಪ್ಪಲು 82 ಮತಗಳನ್ನು, ಮಂಜೇಗೌಡ ತಾಳೂರು 132 ಮತಗಳನ್ನು, ಪುಟ್ಟರಂಗನಾಥ ಬೆಳ್ಳಾವರ 142 ಮತಗಳನ್ನು, ಪ್ರೇಮ ಕುಮಾರ್ ಬೆಳ್ಳಾವರ 3 ಮತಗಳನ್ನು, ಯೋಗೇಶ ಜಿ ಜಿ ಕೊಪ್ಪಲು 6 ಮತಗಳನ್ನು ಪಡೆಯುವ ಮೂಲಕ ಸೋಲುಂಡರು.

ಚುನಾವಣೆ ಪೂರ್ಣಗೊಂಡ ನಂತರ ನೂತನವಾಗಿ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡ ನಿರ್ದೇಶಕರುಗಳನ್ನು ಕಬ್ಬಿನಲ್ಲಿ ಜಗದೀಶ್ ಸೇರಿದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಕುಮಾರ್, ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸುರೇಶ್, ತಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಹರೀಶ್, ಸದಸ್ಯ ಷಡಕ್ಷರಿ, ಕಟ್ಟಡ ಕಾರ್ಮಿಕ ಸಂಘದ ಆಲೂರು ತಾಲೂಕು ಅಧ್ಯಕ್ಷ ಆನಂದ್, ಹಾಗೂ ಗ್ರಾಮಸ್ಥರು ಹಾಜರಿದ್ದರು.

Post a Comment

0 Comments