ಜಾವಳಿ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

 ಮೂಡಿಗೆರೆ : ಚಿಕ್ಕಮಗಳೂರು ಪಶ್ಚಿಮ ಘಟ್ಟಗಳ ಹಸಿರು ಸೌಂದರ್ಯದ ಸ್ವರ್ಗದ ನಾಡು, ಕಾಫಿ ಕಣಜದ ಮೂಡಿಗೆರೆ ತಾಲೋಕು ರಮಣೀಯ ಸ್ಥಳಗಳ ತವರೂರು, ಸದಾ ಹಚ್ಚ ಹಸಿರನ್ನೆ ಹೊದ್ದು ಮಲಗಿರುವ ನಮ್ಮ ಊರು, ಮಲೆನಾಡ ಗಂಗೆ ಎಂದೆ ಇತಿಹಾಸ ಪ್ರಸಿದ್ದಿಗೆ ಹೆಸರಾಗಿರುವ ಶ್ರೀ ಹೇಮಾವತಿ ನದಿ ಮೂಲದ ಜಾವಳಿ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಜಾತ್ರಾ ಮಹೋತ್ಸವವು ಸಮಿತಿ ಅಧ್ಯಕ್ಷರಾದ ಪ್ರವೀಣ್ ಗುರ್ಜರ್ ಅವರ ನೇತೃತ್ವದಲ್ಲಿ ನಡೆಯಿತು.

ಸತ್ಯನಾರಾಯಣ ಪೂಜೆ ಮತ್ತು ಜಾತ್ರ ಉತ್ಸವಕ್ಕೆ ಜಾವಳಿ, ಸುಂಕಸಾಲೆ, ನಿಡುವಾಳೆ, ಬಾಳೂರು, ಕೊಟ್ಟಿಗೆಹಾರ, ಮೂಡಿಗೆರೆ ಭಾಗದಿಂದ ಸಾವಿರಾರು ಭಕ್ತರು ಆಗಮಿಸಿದ್ದರು, ಪೂಜೆ ಹೋಮ ಹವನಗಳ ನಂತರ ಪಲ್ಲಕ್ಕಿ ಉತ್ಸವ ಮತ್ತು ದೇವಸ್ತಾನದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಜಗದೀಶ್ ಗೌಡ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಪರೀಕ್ಷಿತ್ ಜಾವಳಿ, ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್,ಚನ್ನಕೇಶವ ಗೌಡ,ಬಿ.ಎಂ ಸುರೇಶ್ , ಶಶಿಧರ್, ಉಪಾಧ್ಯಕ್ಷ ಮನೋಹರ್,ಬಿ.ಎಲ್ ಸಂದೀಪ್,ಡಿ ವೈ ಮಹೇಶ್, ಜಯರಾಜ್, ಜಾವಳಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಂದ್ರಶೇಖರ್, ಸಂಪತ್, ಸತೀಶ್ ಮಲೆಮನೆ, ಆದರ್ಶ್ ಬಾಳೂರು,ರವಿ, ಸಂಜೀವ್ ಕೋಟ್ಯಾನ್,ಬಾಳೂರು ಪೋಲಿಸ್ ಠಾಣಾಧಿಕಾರಿ ದೀಲಿಪ್ ಮತ್ತು ಬಣಕಲ್ ಪೋಲಿಸ್ ಠಾಣಾಧಿಕಾರಿ ರೇಣುಕಾ ಮತ್ತು ಸಿಬ್ಬಂದಿಗಳು ಇದ್ದರು.

Post a Comment

0 Comments