ಸಂತೋಷ್ ಲಾಡ್ : ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ವಾಗ್ದಾಳಿ

ಹಾಸನ : ಭಾರತ ದೇಶ ಬಿಜೆಪಿ, ಕಾಂಗ್ರೆಸ್ ಸ್ವತ್ತಲ್ಲ. ಅಮೇರಿಕಾದಿಂದ ಭಾರತಿಯರನ್ನು ಕಾಲಿಗೆ ಚೈನ್ ಹಾಕಿಕೊಂಡು ತಂದು ಬಿಸಾಕಿ ಹೋದ್ರಲ್ಲ ಇದು ಇಡೀ ದೇಶಕ್ಕೆ ಅವಮಾನ ಅಲ್ವ.ಭಾರತದಲ್ಲಿ ಹದಿನೆಂಟು ಲಕ್ಷ ಜನ ಪಾಸ್ ಪೋರ್ಟ್ ಸೆರೆಂಡರ್ ಮಾಡಿದ್ದಾರೆ ಇದರ ಬಗ್ಗೆ ಯಾರು ಏಕೆ ಚರ್ಚೆ ಮಾಡಲ್ಲ ಬಿಜೆಪಿಯವರು ಹನ್ನೊಂದು ವರ್ಷದಿಂದ ಏನು ಮಾಡಿದ್ರು ಅದಕ್ಕೆ ಲೆಕ್ಕ ಇಲ್ಲ, ಬುಕ್ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.


ಅವರಿಂದು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶಕ್ಕೆ ಮೋದಿ ಮುಖ್ಯವಲ್ಲ ಭಾರತ ದೇಶ ನಮಗೆ ಮುಖ್ಯ ಅದನ್ನು ಪ್ರಗತಿಯತ್ತ ಕೊಂಡೊಯ್ಯುವ ಪ್ರಧಾನ ಮಂತ್ರಿ ಬೇಕಾಗಿದೆ.ದಿನಕ್ಕೆ ಮೂರು ಬಾರಿ ಬಟ್ಟೆ ಚೇಂಜ್ ಮಾಡ್ತಾರೆ ಸಾಹೇಬ್ರು ದಿನಕ್ಕೆ ಹದಿನಾರು ಗಂಟೆ ಕೆಲಸ ಮಾಡ್ತಾರೆ ಗಡ್ಡ ಒಂದು ಲೈನ್ ಹೆಚ್ಚು ಕಡಿಮೆ ಆಗಂಗಿಲ್ಲ.ಹದಿನಾರು ಗಂಟೆ ಕೆಲಸ ಮಾಡುವವರ ಕಣ್ಣುಗಳು ಹೊಳೆಯುತ್ತಿದೆ. ಏನು ಆಗೇ ಇಲ್ಲ ಎಲ್ಲಾ ರಾಜ್ಯಗಳಲ್ಲೂ ಹೋಗಿ ಮೋದಿ ಸಾಹೆಬ್ರು ಪ್ರೆಸ್ ಮೀಟ್ ಮಾಡಲಿ ಎಂದು ಸವಾಲು ಹಾಕಿದರು. ಮೋದಿಜಿ ಅವರು ಎಂದಾದರೂ ಒಂದು ಪ್ರೆಸ್ ಮೀಟ್ ಮಾಡಿದ್ದಾರಾ. ಕಳೆದ ಲೋಕಸಭಾ ಚುನಾವಣೆ ವೇಳೆ ಮೋದಿಯವರು ಮಂಗಳಸೂತ್ರ ಪಾಕಿಸ್ತಾನ ಎರಡೇ ಮಾತನಾಡಿದ್ದು ಹತ್ತು ವರ್ಷದಿಂದ ಬಿಜೆಪಿಯವರಿಗೆ ಮೋದಿ ಬಿಟ್ಟರೆ ಯಾರೂ ಇಲ್ವಾ

ಕಳೆದ ಹತ್ತು ವರ್ಷದ ನೋವು ಮುಂದೆ ಹೋಗುತ್ತೆ ಮಹಾರಾಜ ಅಲ್ಲಿಂದ ಇಳಿಯುವುದೇ ಪರಿಹಾರ, ರಾಹುಲ್‌ ಗಾಂಧಿ-ಮೋದಿಯವರು ಐದು ಗಂಟೆ ಡಿಬೆಟ್ ಮಾಡಲಿ ನೋಡೋಕೋ ಬಿಜೆಪಿಯಲ್ಲಿ ಕೆಲಸ ಮಾಡುವವರಿಗೆ ಪ್ರಧಾನಮಂತ್ರಿ ಹುದ್ದೆ ಕೊಟ್ಟರೆ ಈ ದೇಶ ಉಳಿಯುತ್ತೆ ಪ್ರಧಾನಿ ಬದಲಾದರೆ ದೇಶದ ಆರ್ಥಿಕ ಪರಿಸ್ಥಿತಿ ಉಳಿಯುತ್ತೆ, ಸಲಹೆ ನೀಡಿದರು.

ಮೋದಿ ಅವರಿಗೆ 75 ವರ್ಷ ವಯಸ್ಸಾಯ್ತು, ಗಡ್ಕರಿ ಬೇರೆ ಯಾರಿಗಾದರೂ ಮಾಡುವವರನ್ನು ಪ್ರಧಾನಮಂತ್ರಿ ಮಾಡಲಿ, ಸಾಹೆಬ್ರು ಪಬ್ಲಿಸಿಟಿಗೆ ಆರು ಸಾವಿರ ಕೋಟಿ ಖರ್ಚು ಮಾಡ್ತಾರೆ. ಖೇಲೋ ಇಂಡಿ ಯಾಗೂ ಅಷ್ಟು ದುಡ್ಡು ಕೊಡಲ್ಲ. ಬಿಜೆಪಿಯವರಿಗೆ ಕೈಮುಗಿದು ಕೇಳ ಪ್ರಧಾನಮಂತ್ರಿ ಬದಲು ಮಾಡಿ ದೇಶನಾದ್ರು ಉಳಿಸಿ ಎಂದರು.

ಕಾಂಗ್ರೆಸ್ ವಕ್ತಾರ ದೇವ ರಾಜೇಗೌಡ, ರಾಮಚಂದ್ರ ಕಬ್ಬಳಿ ಇನ್ನಿತರರು ಮುಖಂಡರು ಹಾಜರಿದ್ದರು.

Post a Comment

0 Comments