ಅರಕಲಗೂಡು: ಶೈಕ್ಷಣಿಕವಾಗಿ ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ನೆರವು ನೀಡುವುದು ಪುಣ್ಯದ ಕೆಲಸ ಎಂದು ಜನ ಜಾಗೃತಿ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಕೆ.ಸತೀಶ್ ಅಭಿಪ್ರಾಯಪಟ್ಟರು.
ತಾಲೂಕಿನ ಹೇಮಾವತಿ ಪ್ರೌಢಶಾಲೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿ ಇತ್ತೀಚೆಗೆ ಕೊಡುಗೆಯಾಗಿ ನೀಡಿದ ಹತ್ತು ಜತೆ ಬೆಂಚು ಡೆಸ್ಕ್‌ಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶಾಲೆಗಳ ಅಭಿವೃದ್ಧಿಗೆ ಉತ್ತಮ ಯೋಜನೆ ರೂಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹೇಮಾವತಿ ವಿದ್ಯಾಸಂಸ್ಥೆ ಅಧ್ಯಕ್ಷ ಧರ್ಮಪಾಲ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲೆಗಳನ್ನು ಉಳಿಸುವಲ್ಲಿ ಧರ್ಮಸ್ಥಳ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತಿದೆ. ಬಡ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕೊಡಗು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಶಾಂತ ಮಲ್ಲಪ್ಪ, ಹೇಮಾವತಿ ಪ್ರೌಢಶಾಲೆಯ ನಿರ್ದೇಶಕ ಪುಟ್ಟಲಿಂಗ, ಉಪಾಧ್ಯಕ್ಷ ಸಣ್ಣಸ್ವಾಮಿ, ಬೇಲೂರೇಗೌಡ, ಸಂಸ್ಥೆ ಮೇಲ್ವಿಚಾರಕಿ ಸ್ಮಜಾತಾ, ಸೇವಾ ಪ್ರತಿನಿಧಿಗಳಾದ ಅಶ್ವಿನಿ, ಬೇಬಿ, ಅನಸೂಯ ಇತರರಿದ್ದರು.



0 Comments