ಈಜುಕೊಳದಲ್ಲಿ ಕೊಡಗಿನ ಆರ್ನಾ ಸಾಧನೆ ‌

 ಮಡಿಕೇರಿ: ಕೊಡಗಿನ ಯುವತಿಯೋರ್ವಳು ಈಜುಕೊಳದಲ್ಲಿ ಹೊಸ ಚರಿತ್ರೆಯನ್ನೇ ಬರೆಯುತ್ತಿದ್ದು, ಭವಿಷ್ಯದ ಭರವಸೆ ಎನಿಸಿದ್ದಾಳೆ.



ಜಿಲ್ಲೆಯ ಮಡಿಕೇರಿ ನಗರದ ನಿವಾಸಿಯಾದ ಮಾದೆಯಂಡ ಪೂವಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಆರ್ನಾ ಎಂ ಪಿ, ರಾಜ್ಯ, ರಾಷ್ಟç ಮತ್ತು ಅಂತಾರಾಷ್ಟಿçÃಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಬಾಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾಳೆ.

ಫ್ರೀ ಸ್ಟೆöÊಲ್ ಈಜುಗಾರ್ತಿಯಾಗಿರುವ ಆರ್ನಾ ಎಂ ಪಿ ಈಜುಕೊಳದಲ್ಲಿ ತನ್ನ ಅಮೋಘ ಸಾಧನೆಯಿಂದಾಗಿ ಈಗಾಗಲೇ 251 ಕ್ಕೂ ಅಧಿಕ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾಳೆ. ಈಗಾಗಲೇ ರಾಷ್ಟç, ಅಂತಾರಾಷ್ಟಿçÃಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಈಕೆ ಭವಿಷ್ಯದಲ್ಲಿ ಒಲಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂದು ಬಯಕೆ ಹೊಂದಿದ್ದಾಳೆ.

ತನ್ನ ತಂದೆಯೊAದಿಗೆ ಬೇಸಿಗೆಯಲ್ಲಿ ಆಟವಾಡಲು ಈಜು ಕೊಳಕ್ಕೆ ತೆರಳುತ್ತಿದ್ದ ಅರ್ನಾಗೆ ಕ್ರಮೇಣ ಈಜಿನಲ್ಲಿಯೇ ಏನಾದರೂ ಸಾಧಿಸಬೇಕೆಂಬ ಬಯಕೆ ಚಿಗುರೊಡೆಯಿತು. ಮಡಿಕೇರಿಯ ಮ್ಯಾನ್ಸ್ ಕಾಂಪೌAಡ್ನಲ್ಲಿರುವ ಈಜುಕೊಳದಲ್ಲಿ ಮನೋಹರ್ ಎಂಬುವವರಿAದ ಆರಂಭಿಕ ಈಜು ತರಬೇತಿ ಪಡೆಯುತ್ತಾಳೆ. ನಂತರ ಪ್ರಯತ್ನ ನಿರಂತರವಾಗಿ ಸಾಗಿದಾಗ ಯಶಸ್ಸು ಕೂಡ ಆರ್ನಾ ಪಾಲಿಗೆ ಒಲಿದು ಬಂದಿದೆ. ಮೊಟ್ಟ ಮೊದಲ ಬಾರಿಗೆ ಮೈಸೂರು ದಸರಾ ಈಜು ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಆರ್ನಾ ಕ್ರೀಡಾ ಜೀವನಕ್ಕೆ ಕಾಲಿರಿಸಿದ್ದಳು. ಅಲ್ಲಿ ಈಕೆಯ ಪ್ರತಿಭೆ ಗುರುತಿಸಿದ ಈಜು ತರಬೇತುದಾರರಾದ ಶಿವಾನಂದ ಗಟ್ಟಿ ಅವರಿಂದ ಆರ್ನಾ ತರಬೇತಿ ಪಡೆದ ಬಳಿಕ ಕೇವಲ 6 ತಿಂಗಳಿನಲ್ಲಿಯೇ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಬೀಗುವ ಮೂಲಕ ಸಾಧನೆಯ ಮೆಟ್ಟಿಲನ್ನು ಏರಲು ಆರಂಭಿಸಿದ್ದಾಳೆ.

ಕೋವಿಡ್ ಬಳಿಕ ಬೆಂಗಳೂರಿಗೆ ತೆರಳಿ ವಿಜಯನಗರ ಅಥ್ಲೆಟಿಕ್ನ ಈಜು ತರಬೇತಿದಾರರಾದ ತಮಿಳ್ ವಣ್ಣನ್ (ಗುಣ) ಅವರ ಬಳಿ ಈಜು ತರಬೇತಿಯನ್ನು ಪಡೆಯುವ ಆರ್ನಾ, ಹಲವು ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಹಾದಿಯಲ್ಲಿ ಮುನ್ನುಗಿದ್ದಾಳೆ. 2022 ರಲ್ಲಿ ಕರ್ನಾಟಕ ಸ್ಟೇಟ್ ಲೆವೆಲ್ 400 ಮೀಟರ್ ಫ್ರೀ ಸ್ಟೆöÊಲ್ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ 10 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದು ಆರ್ನಾ ಹೊಸ ದಾಖಲೆಯನ್ನು ಬರೆದಿದ್ದಾಳೆ. ಈಗಲೂ ಸಹ ಈ ದಾಖಲೆ ಆರ್ನಾಳ ಹೆಸರಿನಲ್ಲಿಯೇ ಇರುವುದು ಹೆಗ್ಗಳಿಕೆಯಾಗಿದೆ. ಆರ್ನಾಳ ಕೋಚ್ ತಮಿಳ್ ವಣ್ಣನ್ ಅವರು ಬೆಂಗಳೂರಿನಿAದ ಚೆನ್ನೆöÊಗೆ ವರ್ಗಾವಣೆಯಾಗಿ ತೆರಳಿದ ಬಳಿಕ ತಮಿಳ್ ವಣ್ಣನ್ ಅವರ ಬಳಿ ತರಬೇತಿ ಪಡೆಯಲು ಆರ್ನಾಳು ಸಹ ಪೋಷಕರೊಂದಿಗೆ ಚೆನ್ನೆöÊಗೆ ತೆರಳಿ ಅಲ್ಲಿ ಚೆಟ್ಟಿನಾಡ್ ವಿದ್ಯಾಶ್ರಮದಲ್ಲಿ ವ್ಯಾಸಂಗಕ್ಕೆ ಸೇರುವ ಮೂಲಕ ಓದಿನೊಂದಿಗೆ ಈಜು ಸ್ಪರ್ಧೆಯಲ್ಲೂ ತೊಡಗಿಸಿಕೊಂಡಿದ್ದಾಳೆ. ಇದೀಗ ಚೆಟ್ಟಿನಾಡ್ ವಿದ್ಯಾಶ್ರಮದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಆರ್ನಾ, ತನ್ನ ಸಾಧನೆಗೆ ತನ್ನ ತರಬೇತುದಾರ ತಮಿಳ್ ವಣ್ಣನ್ ಹಾಗೂ ಈಜು ಸ್ಪರ್ಧೆಯೊಂದಿಗೆ ವ್ಯಾಸಂಗವನ್ನು ಮುಂದುವರೆಸಲು ವಿದ್ಯಾಸಂಸ್ಥೆಯ ಸಹಪಾಠಿಗಳು ಮತ್ತು ಶಿಕ್ಷಕರು ಸಹ ಸಹಕಾರ ನೀಡುತ್ತಿದ್ದಾರೆಂದು ಸ್ಮರಿಸಿಕೊಳ್ಳುತ್ತಾಳೆ.

ಪದಕಗಳ ಬೇಟೆ

ಆರ್ನಾ ಈಜು ಸ್ಪರ್ಧೆಯಲ್ಲಿ ಇದುವರೆಗೂ ರಾಜ್ಯ ಮಟ್ಟದಲ್ಲಿ ಮಟ್ಟದಲ್ಲಿ 80 ಚಿನ್ನದ ಪದಕ, 15 ಬೆಳ್ಳಿ ಪದಕ ಹಾಗೂ 23 ಕಂಚಿನ ಪದಕಗಳನ್ನು ಜಯಿಸಿದ್ದಾಳೆ. ಝೋನಲ್ ಲೆವೆಲ್ನಲ್ಲಿ 23 ಚಿನ್ನದ ಪದಕ, 15 ಬೆಳ್ಳಿ ಪದಕ, 7 ಕಂಚಿನ ಪದಕ ಗಳನ್ನು ಹಾಗೂ ಇಂಟರ್ನ್ಯಾಷನಲ್ ಲೆವಲ್ನಲ್ಲಿ 3 ಚಿನ್ನದ ಪದಕ, 2 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕವನ್ನು ಗೆಲ್ಲುವ ಮೂಲಕ ಒಟ್ಟು 130 ಚಿನ್ನದ ಪದಕ, 81 ಬೆಳ್ಳಿ ಪದಕ ಹಾಗೂ 40 ಕಂಚಿನ ಪದಕಗಳನ್ನು ಗೆದ್ದಿದ್ದಾಳೆ. ಇದರಲ್ಲಿ ಮಹಿಳಾ ಖೇಲೋ ಇಂಡಿಯಾದಲ್ಲಿ 1 ಚಿನ್ನದ ಪದಕ ಹಾಗೂ ಮಿನಿ ಒಲಿಂಪಿಕ್ಸ÷್ನಲ್ಲಿ 8 ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾಳೆ. ತನ್ನ ಸಾಮರ್ಥ್ಯದ ಮೂಲಕವೇ ಒಟ್ಟು 251 ಪದಕಗಳನ್ನು ತನ್ನದಾಗಿಸಿಕೊಂಡ ಹಿರಿಮೆ ಆರ್ನಾಳದ್ದಾಗಿದೆ.



ಆರ್ನಾಳ ತಾಯಿ ಗಾಯತ್ರಿ ಸುಮಾರು 9 ವರ್ಷಗಳ ಕಾಲ ನಾನಾ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಪುತ್ರಿಯ ಸಾಧನೆಗೆ ಒತ್ತಾಸೆಯಾಗಿ ನಿಲ್ಲುವ ಆಕಾಂಕ್ಷೆಯಿAದ ತಮ್ಮ ಕೆಲಸವನ್ನು ತ್ಯಜಿಸಿದರು. ಮಗಳ ಈಜು ಸ್ಪರ್ಧೆಗೆ ಮತ್ತಷ್ಟು ಸಾಥ್ ನೀಡುವ ಸಲುವಾಗಿ ಕೆಲಸವನ್ನು ತ್ಯಜಿಸಿ ಮಗಳೊಂದಿಗೆ ಮಂಗಳೂರು, ಬೆಂಗಳೂರು ಹಾಗೂ ಚೆನೈಗೂ ತೆರಳಿ ಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತಮ್ಮ ಮಗಳು ಮತ್ತಷ್ಟು ಸಾಧನೆ ಮಾಡಿ, ಕೊಡಗು ಹಾಗೂ ದೇಶಕ್ಕೆ ಕೀರ್ತಿ ತರಲೇಂಬ ಬಯಕೆ ಹೊಂದಿದ್ದಾರೆ.

ಈಜುಪಟು ಮೈಕೆಲ್ ಫೆಲ್ಪ್÷್ಸ ನನಗೆ ಆದರ್ಶ. ಅವರಂತೆ ಈಜಿನಲ್ಲಿ ಸಾಧನೆ ಮಾಡಬೇಕೆಂಬುದು ನನ್ನ ಬಯಕೆ. ಭವಿಷ್ಯದಲ್ಲಿ ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ಪದಕ ಜಯಿಸುವ ಆಸೆ ಇದೆ. ಇದುವರೆಗೆ ನನ್ನಈ ಸಾಧನೆಗೆ ಪೋಷಕರು, ಗುರುಗಳು, ಶಾಲೆಯವರಿಂದಲೂ ಉತ್ತಮ ಪ್ರೋತ್ಸಾಹ ದೊರಕಿದೆ.

ಆರ್ನಾ ಎಂ ಪಿ, ಈಜುಪಟು

ಮಗಳ ಸಾಧನೆ ಬಗ್ಗೆ ಖುಷಿ ಇದೆ. ಮುಂದೆ ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ಪದಕ ಗೆಲ್ಲಲಿ ಎಂಬ ಬಯಕೆ ಇದೆ.

ಮಾದೆಯಂಡ ಪೂವಣ್ಣ, ಆರ್ನಾಳ ತಂದೆ

Post a Comment

0 Comments