ಅರಸೀಕೆರೆ : ತೋಟದ ಮನೆಯಲ್ಲಿ ಬಟ್ಟೆ ಒಣಗಿಸಲು ತಂತಿ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಸ್ನೇಹಿತರಿಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ನಡೆದಿದೆ.
ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದ ಬಾಳೆಗೌಡ(75) ಹಾಗೂ ಕುಡುಕುಂದಿ ಗ್ರಾಮದ ಹೊಂಬೇಗೌಡ (55) ಮೃತ ದುರ್ದೈವಿಗಳು.
ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದು ಅಕ್ಕ ಪಕ್ಕದಲ್ಲೇ ತೋಟ ಹೊಂದಿದ್ದರು. ಕುಡುಕುಂದಿ ಗ್ರಾಮದ ಹೊಂಬೇಗೌಡ ತೋಟಕ್ಕೆ ಬಂದಾಗ ಒಂದೆರಡು ದಿನ ಬಾಳೇಗೌಡರ ಮನೆಯಲ್ಲೇ ಉಳಿದು ಹೋಗುತ್ತಿದ್ದರು. ಮಂಗಳವಾರ ಮಧ್ಯಾಹ್ನ ೪:೩೦ರ ಸಮಯದಲ್ಲಿ ಇಬ್ಬರು ಸೇರಿ ಬಟ್ಟೆ ಒಣಗಿಸಲು ತಂತಿ ಕಟ್ಟುತ್ತಿದ್ದ ವೇಳೆ ಮನೆಯ ಆವರಣದಲ್ಲಿ ಸ್ಕಿನ್ ಆಗಿದ್ದ ವಿದ್ಯುತ್ ವೈರ್ ತಂತಿಗೆ ತಗುಲಿ ವಿದ್ಯುತ್ ಶಾಕ್ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


0 Comments