*ಆಲೂರಿನ ಮಗ್ಗೆ ವ್ಯಾಪ್ತಿಯಲ್ಲಿ ಭಾರಿ ಮಳೆ, ಗಾಳಿಗೆ ಬೃಹತ್ ಗಾತ್ರದ ಮರಗಳು, ವಿದ್ಯುತ್ ಕಂಬಗಳ ಮೇಲೆ ಬೀಳುತ್ತಿದ್ದು ತೆರವು ಕಾರ್ಯಾಚರಣೆಗೆ ಸೆಸ್ಕಾಂ ಅಧಿಕಾರಿಗಳ ತುರ್ತು ಕ್ರಮ *

 *ಸುದ್ದಿ ವಿಜಯ*


ಆಲೂರು :- ತಾಲೂಕಿನ ಸೆಸ್ಕಾಂ ಇಲಾಖೆಯ ಮಗ್ಗೆ ಶಾಖೆಯ ವ್ಯಾಪ್ತಿಯಲ್ಲಿ ಬರುವ ಮಗ್ಗೆ, ಮಲ್ಲೇನಹಳ್ಳಿ, ಹೈದೂರು ಆಚಗೌಡನಹಳ್ಳಿ,  ಮಠದ ಕೊಪ್ಪಲು,  ಗ್ರಾಮಗಳಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಗಾಳಿಗೆ ಬೃಹತ್ ಗಾತ್ರದ ಮರಗಳು,  ಕಾಫಿ ತೋಟದ ಮರಗಳು ದಿನೇ ದಿನೇ ಬೀಳುತ್ತಿದ್ದು ಕೆಲವೆಡೆ ರಸ್ತೆಗೆ ಮರಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದ್ದರೆ ಇನ್ನೂ ಹಲವೆಡೆ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮುರಿದು ಹೋಗುತ್ತಿವೆ. ಇದರಿಂದಾಗಿ ಹತ್ತಾರು ಗ್ರಾಮಗಳಿಗೆ ವಿದ್ಯುತ್ ವ್ಯಥೆಯು ಉಂಟಾಗುತ್ತಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತೆರವು ಕಾರ್ಯಚರಣೆಯು ಸಹ ಕಷ್ಟಕರವಾಗಿದೆ. ಆದರೂ ಸಹ ಮಳೆಯಲ್ಲಿ ಸೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಮುರಿದು ಬಿದ್ದ ಮರಗಳನ್ನು ತೆರವುಗೊಳಿಸುವುದರಲ್ಲಿ ನಿರತರಾಗಿದ್ದು ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಮಗ್ಗೆ ಶಾಖಾಧಿಕಾರಿ ಬೈರೇಶ್ ಹಾಗೂ ಆಲೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಘವೇಂದ್ರ ಅವರು ಮಾಧ್ಯಮದೊಂದಿಗೆ ಮನವಿ ಮಾಡಿದ್ದಾರೆ.

Post a Comment

0 Comments