ರುದ್ರಾಕ್ಷಿ ಮಾಲೆ ನೀಡಿ ಸಂತೃಪ್ತಿ ಮನೋಭಾವದಿಂದ ಖುಷಿ ಪಡುತ್ತಿದ್ದ ಕೆಸಗೋಡು ಏಕಾಂಗಿ ಹೋರಾಟಗಾರ ತೀರ್ಥಪ್ಪ ನೆನಪು ಮಾತ್ರ.

 


ಹೆಗಲಿನಲ್ಲಿ ಎರಡು ಬ್ಯಾಗು, ಕೈಯಲ್ಲಿ ಸಿದ್ದಗಂಗಾ ಪೂಜ್ಯರ ಭಾವಚಿತ್ರ ಹಿಡಿದು ತಾಲ್ಲೂಕಿನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸಿದ್ದಗಂಗಾ ಶ್ರೀಗಳ ಪೋಟೋಗಳನ್ನು ಯಾವುದೇ ಹಣ ಪಡೆಯದೆ ಉಚಿತವಾಗಿ ನೀಡುತ್ತಾ ಬಹುತೇಕರ ಮನೆ ಮನೆಗೆ ಪೂಜ್ಯರ ಭಾವಚಿತ್ರದ ಜೊತೆಗೆ ರುದ್ರಾಕ್ಷಿ ಮಾಲೆ ನೀಡಿ ಸಂತೃಪ್ತಿ ಮನೋಭಾವದಿಂದ ಖುಷಿ ಪಡುತ್ತಿದ್ದ ಕೆಸಗೋಡು ಏಕಾಂಗಿ ಹೋರಾಟಗಾರ ತೀರ್ಥಪ್ಪ ನೆನಪು ಮಾತ್ರ.

     ತಾಲ್ಲೂಕಿನ ಬಿಕ್ಕೋಡು, ಅರೇಹಳ್ಳಿ ಸೇರಿದಂತೆ ವಿವಿಧ ಭಾಗದಲ್ಲಿರುವ ವಿದ್ಯುತ್, ಕುಡಿಯುವ ನೀರಿನ ಸಮಸ್ತೆ, ಹದಗೆಟ್ಟ ರಸ್ತೆ, ರೋಗಗ್ರಸ್ತ ಆಸ್ಪತ್ರೆ, ರುದ್ರಭೂಮಿ ಒತ್ತುವರಿ ಸೇರಿದಂತೆ ಹತ್ತಾರು ಸಮಸ್ಯೆಗಳಿಗೆ ಬೇಲೂರು ತಾಲ್ಲೂಕು ಕಚೇರಿ, ಚೆಸ್ಕಾಂ ಮುಂಭಾಗ, ತಾಲ್ಲೂಕು ಪಂಚಾಯತಿ ಮುಂಭಾಗ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಯಾವುದೇ ಅಂಜಿಕೆ ಇಲ್ಲದೆ ಏಕಾಂಗಿ ಮೂಲಕ ಹೋರಾಟ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಶ್ರೀಕಾರ ಹಾಕಿ ಕೆಸಗೋಡು ಏಕಾಂಗಿ ಹೋರಾಟಗಾರ ತೀರ್ಥಪ್ಪ ನೆನಪು ಮಾತ್ರ.

ಯಾವುದೇ ಇಲಾಖೆ ಅಧಿಕಾರಿಗಳು ಇರಲಿ, ಯಾವುದೇ ಪಕ್ಷದ ರಾಜಕೀಯ ಮುಖಂಡರು ಇರಲಿ ನೇರ, ದಿಟ್ಟತನದಿಂದ  ಅವರ ಹುಳುಕುಗಳನ್ನು ಸಮಾಜಕ್ಕೆ ತಿಳಿಸುತ್ತಾ ಜಿಲ್ಲೆ ಮತ್ತು ತಾಲ್ಲೂಕು ಪತ್ರಕರ್ತರಲ್ಲಿ ಅವಿನಾಭಾವ ಸಂಬಂಧದೊಂದಿಗೆ ಜನಾನುರಾಗಿ, ಸಮಾಜಮುಖಿ ಕಾರ್ಯಗಳೊಂದಿಗೆ ಗಮನ ಸೆಳೆದ ಕೆಸಗೋಡು ಏಕಾಂಗಿ ಹೋರಾಟಗಾರ ತೀರ್ಥಪ್ಪ ನೆನಪು ಮಾತ್ರ.

ಹೌದು ಸ್ನೇಹಿತರೇ ಸದಾ ಸಿದ್ದಗಂಗಾ ಪೂಜ್ಯರ ಬಗ್ಗೆ ಅಪಾರ ಭಕ್ತಿಯನ್ನು ಬೆಳೆಸಿಕೊಂಡ ಕೆಸಗೋಡು ಏಕಾಂಗಿ ಹೋರಾಟಗಾರ ತೀರ್ಥಪ್ಪ, ಸಿದ್ದಗಂಗಾ ಪರಂಪರೆಯ ಹಾಸನದ ತಣ್ಣೀರುಹಳ್ಳ ಮಠದ ಸನ್ನಿಧಿಯಲ್ಲಿಯೇ ಲಿಂಗೈಕ್ಯರಾಗಿದ್ದಾರೆ. ನಿಜಕ್ಕೂ ಕಾಕತಾಳೀಯ. ಎಂಬಂತೆ ಉಸಿರು ಉಸಿರಿನಲ್ಲಿ ನಡೆದಾಡುವ ದೇವರನ್ನು‌‌ ನಂಬಿದ ತೀರ್ಥಪ್ಪರವ ಶಿವೈಕ್ಯ ಶರಣರ ಬದುಕು ಮರಣದಲ್ಲಿ‌ ನೋಡು ಎಂಬ ಬಸವಾದಿ ಶರಣರ ಮಾತು ಸತ್ಯವಾಗಿದೆ.

ಮೊನ್ನೆ ತಾನೇ ಪುಷ್ಪಗಿರಿ ಜಗದ್ಗುರುಗಳು ಪುಷ್ಪಗಿರಿ ಮಠದಲ್ಲಿ ನಡೆದ ಕಾರ್ಯಾಗಾರದಲ್ಲಿ ತೀರ್ಥಪ್ಪನವರನ್ನಿ ವೇದಿಕೆಗೆ ಅವಕಾಶ ನೀಡಿ ಅವರ ಕಾರ್ಯಕ್ಷಮತೆ ಬಗ್ಗೆ ಮಾತನಾಡಿದ್ದು ಇನ್ನು ಮಾಸುವ ಮುನ್ನವೇ ತೀರ್ಥಪ್ಪನವರ ಲಿಂಗೈಕ್ಯದ ಸುದ್ದಿ ನಿಜಕ್ಕೂ ನೋವು ತಂದಿದೆ.ಬಸವಾದಿ ಶರಣರು ಚಿರ ಶಾಂತಿ‌ ನೀಡಿಲಿ...

✍️  ಹೆಬ್ಬಾಳು ಹಾಲಪ್ಪ. ಪತ್ರಕರ್ತರು

ಅಧ್ಯಕ್ಷರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಬೇಲೂರು.

Post a Comment

0 Comments