ಸರಕಾರಿ ಶಾಲೆಗಳೇ ದೇಶದ ನಿಜವಾದ ಸಂಪತ್ತು : ರಿಚರ್ಡ್ ಸುಂದರ್ ರಾಜ್*

*ಸರಕಾರಿ ಶಾಲೆಗಳೇ ದೇಶದ ನಿಜವಾದ ಸಂಪತ್ತು : ರಿಚರ್ಡ್ ಸುಂದರ್ ರಾಜ್*


ಆಲೂರು : ದೇಶದ ನಿಜವಾದ ಆಸ್ತಿಯೆಂದರೆ ಅದು ಸರಕಾರಿ ಶಾಲೆಗಳು. ಸರಕಾರಿ ಶಾಲೆಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಹಂಜಳಿಗೆ ಕಾಳಿಂಗಪ್ಪ ವೆಲ್ಫೇರ್ ಸಂಸ್ಥೆಯ ಸ್ವಯಂ ಸೇವಕರಾದ ರಿಚರ್ಡ್ ಸುಂದರ್ ರಾಜ್ ಅಭಿಪ್ರಾಯಪಟ್ಟರು.

ಅವರು ಆಲೂರು ತಾಲ್ಲೂಕು ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿ ತಾಳೂರು ಶಾಲೆಯ ೧೮ ಮಕ್ಕಳಿಗೆ ತಮ್ಮ ಕಲಿಕೆಗೆ ಪೂರಕವಾದ ತಲಾ ಐದರಿಂದ ಒಂಭತ್ತು ಪುಸ್ತಕಗಳನ್ನು, ಲೇಖನ ಪರಿಕರಗಳಾದ ಪೆನ್, ಪೆನ್ಸಿಲ್, ಸ್ಕೇಲ್ ಗಳನ್ನು ಕೊಡುಗೆಯಾಗಿ ಕೊಟ್ಟಿರುವುದು ಹಳ್ಳಿ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲೆಂದು ಈ ಅವಕಾಶವನ್ನು ಮಕ್ಕಳು ಸದ್ಭಳಕೆ ಮಾಡಿಕೊಳ್ಳಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಮಾತನಾಡಿ ಕಳೆದ ಹಲವು ವರ್ಷಗಳಿಂದ ಹಂಜಳಿಗೆ ಮಂಜುನಾಥ್‌ರವರು ತಮ್ಮ ಸಂಸ್ಥೆಯ ಮೂಲಕ ನಮ್ಮ ತಾಲ್ಲೂಕಿನ ಸರಕಾರಿ ಶಾಲೆಗಳಿಗೆ “ನಮ್ಮಯ ನಡಿಗೆ ಸರಕಾರಿ ಶಾಲೆಗಳ ಕಡೆಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ನೋಟ್ ಪುಸ್ತಕಗಳು, ಬ್ಯಾಗ್‌ಗಳು, ಗ್ರೀನ್ ಬೋರ್ಡ್ಗಳು, ಕಂಪ್ಯೂಟರ್‌ಗಳು, ಸ್ಮಾರ್ಟ್ ಕ್ಲಾಸ್ ಹೀಗೆ ಸರಕಾರಿ ಶಾಲೆಗಳ ಅಭ್ಯುದಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್, ಸಹ ಶಿಕ್ಷಕಿ ವಿ.ರವಿತ, ಅತಿಥಿ ಶಿಕ್ಷಕಿ ಎ.ಎಸ್.ರೇಖಾ ಉಪಸ್ಥಿತರಿದ್ದರು.

Post a Comment

0 Comments