ಹಾಸನ :-ಕೇಂದ್ರ ಸರ್ಕಾರದ ನಶಾಮುಕ್ತ ಭಾರತ ಅಭಿಯಾನ ಯೋಜನೆ ಪ್ರಾರಂಭವಾಗಿ 5ನೇ ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವನೆ ಮಾಡದೇ ಇರುವುದಾಗಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳು, ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಸ್ಥಳೀಯ ಸಂಸ್ಥೆಗಳು, ಮಹಿಳಾ ಸ್ವಸಹಾಯ ಗುಂಪುಗಳು, ವಸತಿ ನಿಲಯಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಾಮೂಹಿಕ ಪ್ರತಿಜ್ಞೆಯನ್ನು ಕೈಗೊಂಡಿರುತ್ತಾರೆ. ಅಲ್ಲದೆ, ನಶಾಮುಕ್ತ ಭಾರತ ಅಭಿಯಾನದ ರಾಷ್ಟ ಮಟ್ಟದ ಕಾರ್ಯಕ್ರಮವನ್ನು ಪಂಜಾಬ್ ರಾಜ್ಯದ ಅಮೃತಸರದಲ್ಲಿ ನ.18ರಂದು ನಡೆಸಲಾಗಿದ್ದು, ಇಡೀ ಕಾರ್ಯಕ್ರಮವು ಭಾರತಾದ್ಯಂತ ಬೆಳಿಗ್ಗೆ 11.30 ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೇರ ಪ್ರಸಾರವಾಯಿತು. ಹಾಸನ ಜಿಲ್ಲೆಯಲ್ಲಿಯೂ ಸಹ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿಯ ಎನ್.ಐ.ಸಿ. ಕೇಂದ್ರದ ಮೂಲಕ ಆನ್‌ಲೈನ್ ಲೈವ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಯುವಕರು ಪ್ರತಿ ರಾಷ್ಟçದ ಶಕ್ತಿಯಾಗಿರುತ್ತಾರೆ ಮತ್ತು ಯುವ ಶಕ್ತಿಯು ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆಯನ್ನು ನೀಡುವಲ್ಲಿ ಪಾತ್ರವನ್ನು ವಹಿಸುತ್ತಿದೆ, ಆದ್ದರಿಂದ, ಅತೀ ಹೆಚ್ಚು ಯುವಕರು ನಶಾ ಮುಕ್ತ ಭಾರತ ಅಭಿಯಾನದಲ್ಲಿ ಭಾಗವಹಿಸಿ ಕೊಡುಗೆ ನೀಡುವುದು ಬಹಳ ಮುಖ್ಯ. ದೇಶದ ಈ ಸವಾಲನ್ನು ಸ್ವೀಕರಿಸಿ. ಇಂದು ನಾವು ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಒಂದಾಗುತ್ತಿದ್ದೇವೆ ಮತ್ತು ಸಮುದಾಯ ಕುಟುಂಬ ಸ್ನೇಹಿತರು ಮಾತ್ರವಲ್ಲದೆ ನಾವೂ ಮಾದಕ ವ್ಯಸನದಿಂದ ಮುಕ್ತರಾಗುತ್ತವೆ ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇವೆ. ಏಕೆಂದರೆ ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಬೇಕಿರುತ್ತದೆ.ಆದ್ದರಿAದ ನಾವೆಲ್ಲರೂ ಒಟ್ಟಾಗಿ ನಮ್ಮ ರಾಜ್ಯ/ಜಿಲ್ಲೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ದೃಢ ನಿರ್ಧಾರ ತೆಗೆದುಕೊಳ್ಳುತ್ತೇವೆ.ನನ್ನ ದೇಶವನ್ನು ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸಲು ನನ್ನ ಕೈಲಾದಷ್ಟು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ ಎಂದುಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.



0 Comments