ಹಾಸನ: ಉದ್ದಿಮೆದಾರರು ಕೈಗಾರಿಕೆಗಳನ್ನು ಪ್ರಾರಂಭಿಸಲು ಕೇವಲ ತರಬೇತಿ, ಕೈಗಾರಿಕೆಗಳ ಬಗ್ಗೆ ಮಾತ್ರವಲ್ಲ ವಿದ್ಯುತ್, ನೀರು, ಉದ್ಯೋಗ ಇವುಗಳ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡು ಬ್ಯಾಂಕಿನ ಸಹಕಾರಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಕಾಸಿಯಾ ಸಂಸ್ಥೆ ಅಧ್ಯಕ್ಷರಾದ ಗಣೇಶ್ ರಾವ್ ಬಿ.ಆರ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಎಂ.ಎಸ್.ಎA.ಇ ಉದ್ದಿಮೆಗಳು ತಮ್ಮ ಸಾಮರ್ಥ್ಯವನ್ನು ಮತ್ತು ಆರ್ಥಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಎಂ.ಎಸ್.ಎA.ಇ ಉದ್ದಿಮೆದಾರರಿಗೆ ಕಾಸಿಯಾ ಸಂಸ್ಥೆ, ಬೆಂಗಳೂರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಹಾಸನ ಹಾಗೂ ಹಾಸನ ಜಿಲ್ಲಾ ಕೈಗಾರಿಕೆಗಳ ಸಂಘದವರ ವತಿಯಿಂದ ನಡೆದ ಒಂದು ದಿನದ ಐಇಂಓ ಯೋಜನೆ ಮತ್ತು ZED ಕಾರ್ಯಾಗಾರದಲ್ಲಿ ಮಾತನಡಿದರು.
ಮಲೆನಾಡು ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಬೆಳೆಯಬೇಕಾಗಿದೆ. ಹಾಗೂ ಉದ್ದಿಮೆದಾರರಿಗೆ ಸಾಕಷ್ಟು ತೊಂದರೆಗಳಿದ್ದು, ಈ ರೀತಿಯ ಕಾರ್ಯಕ್ರಮಗಳ ಮೂಲಕ ಸಲಹೆ ಸೂಚನೆಗಳು ಸಿಗುತ್ತದೆ, ಉದ್ದಿಮೆದಾರರಿಗೆ ಕೇವಲ ತರಬೇತಿ ಜೊತೆಯಲ್ಲಿ ಕೈಗಾರಿಕೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹಾಗೂ ಕೈಗಾರಿಕೆಗಳನ್ನು ಪ್ರಾರಂಭಿಸಲು ವಿದ್ಯುತ್, ನೀರು, ಉದ್ಯೋಗ ಇವುಗಳ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡು ಬ್ಯಾಂಕಿನ ಸಹಕಾರದೊಂದಿಗೆ ಕೈಗಾರಿಕೆಗಳು ಅಭಿವೃದ್ದಿಯಾಗಬೇಕೆಂದು ಕರೆ ನೀಡಿದರು.
ಜಿಕೈಕೇ ಜಂಟಿ ನಿರ್ದೇಶಕರಾದ ವಿ ಉಮೇಶ ಅವರು ಮತನಾಡಿ, ಹಾಸನದಲ್ಲಿ ಇರುವಂತ ಎಂ.ಎಸ್.ಎA.ಇ ಉದ್ದಿಮೆದಾರರು ಕೇಂದ್ರ ಸರ್ಕಾರದ RAMP ಯೋಜನೆಯಡಿಯಲ್ಲಿರುವ ZED & LEAN ಕಾರ್ಯಾಗಾರದ ಉದ್ದೇಶವನ್ನು ಸ್ಥಳೀಯ ಎಂ.ಎಸ್.ಎA.ಇ ಉದ್ದಿಮೆದಾರರು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರು ಮಾಡುವುದು ಹಾಗೂ ರಫುö್ತ ಮಾಡುವುದರಿಂದ ತಮ್ಮ ಆರ್ಥಿಕ ಗುಣಮಟ್ಟದಲ್ಲಿ ಸಬಲರಾಗಬೇಕೆಂದು ಮತ್ತು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಲಘು ಉದ್ಯೋಗ ಭಾರತಿ ನಿರ್ದೇಶಕರಾದ ಮದನ್ ಕುಮಾರ್ ಮಾತನಾಡಿ ಎಂ.ಎಸ್.ಎA.ಇ ಉದ್ದಿಮೆದಾರರು ಉತ್ಪಾದಿಸುವ ಉತ್ಪನ್ನಗಳಲ್ಲಿ Zero Effect Zero Deffect Policy ಯನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ವಿದೇಶಗಳಿಗೆ ರಫುö್ತ ಮಾಡುವ ಬಗ್ಗೆ ಯೋಚಿಸಬೇಕೆಂದು ತಿಳಿಸಿದರು.
ಹಾಸನ ಜಿಲ್ಲಾ ಅಭಿವೃದ್ದಿ ಸಮಿತಿ ಕಾಸಿಯಾ ಹಾಸನ ಜಿಲ್ಲಾ ಪ್ಯಾನಲ್ ಅಧ್ಯಕ್ಷ ಪ್ರಕಾಶ್ ಎಸ್ ಯಾಜಿ ಮಾತನಾಡಿ ಎಂ ಎಸ್ ಎಂ ಇ ಗಳು ದೇಶದ ಅಭಿವೃದ್ದಿಗೆ ಹಾಗೂ GDP ಅಭಿವೃದ್ದಿಗೆ ನೀಡುತ್ತಿರುವ ಕೊಡುಗೆ ಮಹತ್ವದಾಗಿದೆ ಎಂದು ತಿಳಿಸಿದರು. ಹಾಗೂ Technical Skill Upgradation ಹಾಗೂ Quality of Product ತಯಾರಿಕೆ ಬಗ್ಗೆ ಗಮನ ಹರಿಸಬೆಕೆಂದು ಕರೆ ನೀಡಿದರು.
ಕಾರ್ಯಗಾರದಲ್ಲಿ ಹಾಸನ ಜಿಲ್ಲಾ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಮ್, ಪ್ರದಾನ ಕಾರ್ಯದರ್ಶಿ ಸುದರ್ಶನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ, ಉಪ ನಿರ್ದೇಶಕರು ಗ್ರಾ,ಕೈ ಕೆ.ಎಸ್ ರವಿಪ್ರಸಾದ್, ಜಿಕೈಕೇ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ರವರು, ಕಾಸಿಯಾ ಪ್ರತಿನಿಧಿಯಾದ ಶ್ರೀಧರ್, ಸುಚಿತ್ ಕುಮಾರ್, ನಿಂಗಣ್ಣ ಎಸ್ ಬಿರಾದಾರ್ ಸೇರಿದಂತೆ ಇತರರಿದ್ದರು.



0 Comments