ಹಾಸನ: ತಾಲೂಕಿನ ಶ್ರೀ ಹಳ್ಳದ ರಾಮಲಿಂಗೇಶ್ವರ, ಶ್ರೀ ಕಾಶಿರಾಮೇಶ್ವರ ಸ್ವಾಮಿ, ಶ್ರೀ ಮಾರುತಿ ಆಂಜನೇಯಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ಅಮ್ಮನವರ 55ನೇ ರ‍್ಷದ ಕುಂಭಾಭಿಷೇಕ ಮಹೋತ್ಸವ ಸೋಮವಾರದಂದು ಭಕ್ತಿ-ಭಾವದ ವಾತಾವರಣದಲ್ಲಿ ವೈಭವದಿಂದ ನೆರವೇರಿತು.
ದಶಕಗಳ ಸಂಪ್ರದಾಯ ಮತ್ತು ಕ್ಷೇತ್ರದ ಧರ‍್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಮಹೋತ್ಸವಕ್ಕೆ ಭಕ್ತಾದಿಗಳ ಸಾವಿರಾರು ಸಂಖ್ಯೆಯ ಹರಿವು ಕಂಡುಬಂತು.
ಈ ಮಹೋತ್ಸವದ ಅಂಗವಾಗಿ ಶಾಸಕ ಸ್ವರೂಪ್ ಪ್ರಕಾಶ್ ದೇಗುಲಗಳಿಗೆ ಭೇಟಿ ನೀಡಿ, ಪುಷ್ಪಗಿರಿ ಶ್ರೀ ಮಠದ ಪೀಠಾಧೀಶರಾದ ಶ್ರೀ ಸೋಮಶೇಖರ ಶಿವಾಚರ‍್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಆಶರ‍್ವಾದ ಪಡೆದಿದ್ದಾರೆ.
ದೇವಸ್ಥಾನಗಳಲ್ಲಿ ವೇದಘೋಷ, ಮಂಗಳಧ್ವನಿ, ವಾದ್ಯಮೇಳಗಳು ಹಾಗೂ ಋತುಪರಿವಾರಗಳ ಪೂಜೆ ವಿಧಾನಗಳು ಭಕ್ತಿ ಭಾವವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಈ ಸಂರ‍್ಭದಲ್ಲಿ ಸ್ಥಳೀಯ ಮುಖಂಡರು, ವಿವಿಧ ಹಳ್ಳಿಗಳ ಕರ‍್ಯರ‍್ತರು, ಗ್ರಾಮಸ್ಥರು, ಮಹಿಳೆಯರು, ಹಿರಿಯರು ಹಾಗೂ ಭಕ್ತಾಧಿಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದರು. ಸಮಾಜದ ಎಲ್ಲ ರ‍್ಗಗಳ ಜನರು ಒಂದೇ ವೇದಿಕೆಯಲ್ಲಿ ಸೇರಿ ಧರ‍್ಮಿಕ ಭಾವಕ್ಯತೆಯ ನಿಜವಾದ ಸಂದೇಶವನ್ನು ಈ ಮಹೋತ್ಸವವೊಂದು ಬಿತ್ತರಿಸಿತು.
ಕುಂಭಾಭಿಷೇಕದ ಬಳಿಕ ದೇಗುಲ ಆವರಣದಲ್ಲಿ ಅನ್ನಸಂರ‍್ಪಣೆ, ಭಜನ ಮಂಡಳಿಗಳ ಗಾಯನ, ಸಾಂಸ್ಕೃತಿಕ ಕರ‍್ಯಕ್ರಮಗಳು ಹಾಗೂ ರ‍್ಮೋಪದೇಶಗಳ ಮೂಲಕ ಮಹೋತ್ಸವದ ಗಂಭೀರತೆ ಮತ್ತು ಸಂಸ್ಕೃತಿಯ ಆಳವನ್ನು ಅಭಿವ್ಯಕ್ತಿಪಡಿಸಲಾಯಿತು.


0 Comments