ಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯದ ಮುಖಂಡರಿಂದ ಪ್ರತಿಭಟನೆ: ಪಕ್ಷಗೋಸ್ಕರ ಕೆಲಸ ಮಾಡಿದವರಿಗೆ ಸ್ಥಾನ ನೀಡುವಂತೆ ಕಯುಮ್‌ ಆಗ್ರಹ

 ಹಾಸನ: ಹುಡಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಮುಖಂಡರಿಗೆ ಕೊಡಬೇಕೆಂದು ಇಂದು ಪ್ರತಿಭಟನಾಕಾರರಿಂದ ಹೋರಾಟ ನಡೆಸಲಾಗಿದೆ. ಆದರೆ ಹೋರಾಟದಲ್ಲಿ ತಾಜಿಂ ಎಂಬುವವರನ್ನು ಬೆಂಬಲಿಸಿರುವುದಕ್ಕೆ ಕಾಂಗ್ರೆಸ್‌ ಪಕ್ಷದ ಮುಂಖಡರಿಂದಲೇ ಆಕ್ಷೇಪ ವ್ಯಕ್ತವಾಗಿದೆ.



ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ  ಹಾಸನ ನಗರ ಕಾಂಗ್ರೆಸ್ ಬ್ಲಾಕ್‌ ಅಧ್ಯಕ್ಷ ಅಬ್ದುಲ್ ಅವರು, ಹುಡಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಮುಖಂಡರಿಗೆ ಕೊಡಬೇಕು. ಆದರೆ ಪಕ್ಷದಲ್ಲಿ ದುಡಿದವರು, ಪಕ್ಷಗೋಸ್ಕರ ಕೆಲಸ ಮಾಡಿದವರು, ಎಂಪಿ, ಎಂಎಲ್‌ಎ ಎಲೆಕ್ಷನ್ ಅಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಬಹಳ ಜನ ಮುಖಂಡರು ನಾಯಕರು ಇದ್ದಾರೆ. ಅವರಲ್ಲಿ ಯಾರಾದರು ಒಬ್ಬರನ್ನ ಆಯ್ಕೆ ಮಾಡಿ ಅವರಿಗೆ ಅವಕಾಶ ಕೊಡಬಹುದು ಎಂದಿದ್ದಾರೆ.

ಆದರೆ ಇಂದು  ಮಾಡಿದ ಪ್ರೊಟೆಸ್ಟ್‌ನಲ್ಲಿ ಯಾರೂ ಕೂಡ ಒಂದೇ ಒಂದು ದಿನ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದಿಲ್. ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಒಂದು ಮತವನ್ನು ಕೂಡ ಕೇಳಿಲ್ಲ. ಒಂದು ದಿನ ಕಾಂಗ್ರೆಸ್ ಆಫೀಸಿಗೆ ಬಂದಿಲ್ಲ, ಹಾಗಿದ್ದರೆ ಇಂದು ಪ್ರತಿಭಟನೆ ಮಾಡಿದ ಇವರು ಯಾರು ಎನ್ನೋ ಪ್ರಶ್ನೆ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆಯಾಗಿದೆ ಎಂದು ಆರೋಪ ಮಾಡಿದ್ದಾರೆ.

ಪಕ್ಷದಲ್ಲಿ ಇವರ ಸ್ಥಾನ ಏನು ಕಾಂಗ್ರೆಸ್ ಪಕ್ಷದಲ್ಲಿ ಇವರ ಅಸ್ತಿತ್ವ ಏನು? ಕಾಂಗ್ರೆಸ್ ಪಕ್ಷಕ್ಕೆ ಇವರ ಕೊಡುಗೆ ಏನು , ಇವರು ಎಷ್ಟು ವರ್ಷದಿಂದ ಕಾಂಗ್ರೆಸ್ನಲ್ಲಿದ್ದಾರೆ ಎನ್ನೋದು ಯಕ್ಷಪ್ರಶ್ನೆಯಾಗಿದೆ, ಹಾಗಾಗಿ ಪಕ್ಷದಲ್ಲಿ ದುಡಿದ ಹಿರಿಯರಿಗೆ ಅವಕಾಶ ಮಾಡಿಕೊಡಬೇಕಾಗಿ ಈ ಮೂಲಕ ಪಕ್ಷದ ವರಿಷ್ಟರಲ್ಲಿ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Post a Comment

0 Comments