ಆಲೂರು : ಒಂದೇ ರಾತ್ರಿಯಲ್ಲಿ ತಾಲ್ಲೂಕಿನಲ್ಲಿ ಮೂರು ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕುಂದೂರು ಹೋಬಳಿ ಗಂಜಿಗೆರೆ, ಸುಳುಗೊಡು.ಹಾಗೂ ಕಿರಗಡಲು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ತಾಲೂಕಿನ ಕುಂದೂರು ಹೋಬಳಿ ಗಂಜಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 28 ಹಳ್ಳಿಗೆ ಸೇರಿದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ಗ್ರಿಲ್ ಕಟ್ ಮಾಡಿ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಮಂಗಳವಾರ ತಡರಾತ್ರಿ ಕಳವು ಮಾಡಿದ್ದಾರೆ.
ಒಂದು ವರ್ಷದಿಂದ ಕಾಣಿಕೆ ಹುಂಡಿಯ ಹಣವನ್ನು ಎಣಿಕೆ ಮಾಡಿರಲಿಲ್ಲ. ಹುಂಡಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಇತ್ತು ಎನ್ನಲಾಗಿದೆ. ಕಳ್ಳರು ದೇವಾಸ್ಥಾನದಿಂದ ಹುಂಡಿಯನ್ನು ಕದ್ದ ಕಳ್ಳರು ಸರ್ಕಾರಿ ಶಾಲೆ ಆವರಣದಲ್ಲಿ ಹುಂಡಿ ಹೊಡೆದು ಅದರಲ್ಲಿದ್ದ ಹಣವನ್ನು ದೋಚಿ ಹುಂಡಿಯನ್ನು ಹಲ್ಲೇ ಬಿಟ್ಟು ಹೋಗಿದ್ದಾರೆ. ದೇವಸ್ಥಾನದಲ್ಲಿ ಇದು ಎರಡನೇ ಬಾರಿಯ ಕಳ್ಳತನವಾಗಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿ ಶೀಘ್ರ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ
ಮಂಗವಾರ ಬೆಳಿಗ್ಗೆ ದೇವಾಲಯಕ್ಕೆ ಆರ್ಚಕರು ಬಂದಾಗ ಹುಂಡಿಯ ಬೀಗ ಒಡೆದಿರುವುದು ಕಂಡು ಬಂದಿದೆ. ತಕ್ಷಣ ದೇವಾಲಯದ ಆಡಳಿತ
ಮಂಡಳಿಗೆ ವಿಷಯ ತಿಳಿಸಿದ್ದು, ಆಡಳಿಯ ಮಂಡಳಿಯವರು ಆಲೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೇ ರೀತಿ ಸುಳುಗೊಡು ಶ್ರೀ ದೇವಿರಮ್ಮ ಹಾಗೂ ಕಿರಗಡಲು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಾಸ್ಥಾನದಲ್ಲಿಯು ಸಹ ಮಂಗಳವಾರ ರಾತ್ರಿ ದೇವಾಲಯದ ಹುಂಡಿ ಹಣ ಕಳವು ಮಾಡಿದ್ದು ಜನಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡಿದೆ ಈ ಸರಣಿ ಕಳ್ಳತನವನ್ನು ಒಂದೇ ಗ್ಯಾಂಗ್ ಮಾಡಿರಬಹುದೆಂದು ಊಹಿಸಲಾಗಿದೆ.
ವಿಷಯ ತಿಳಿದ ಪೊಲೀಸರು ದೇವಾಲಯವನ್ನು ಪರಿಶೀಲಿಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಶೋಧ ಕಾರ್ಯ ನಡೆಸಿದ್ದಾರೆ. ಕಳ್ಳರಿಗಾಗಿ ಜಾಲ ಬೀಸಿದ್ದಾರೆ ಎಂದು ಹೇಳಲಾಗಿದೆ.




0 Comments